ಸೋಮವಾರ, ಜೂನ್ 27, 2022
28 °C

ಪಾರ್ಲೆ ಗೋಧಿ ಹಿಟ್ಟು ಮಾರುಕಟ್ಟೆಗೆ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಸ್ಕತ್ತು ತಯಾರಿಕಾ ಕಂಪನಿ ಪಾರ್ಲೆ, ಗೋಧಿ ಹಿಟ್ಟು ಮಾರುಕಟ್ಟೆ ಪ್ರವೇಶಿಸಿದೆ. ‘ಪಾರ್ಲೆ–ಜಿ ಚಕ್ಕಿ ಆಟ್ಟಾ’ ಹೆಸರಿನಲ್ಲಿ ಗೋಧಿ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ಈ ಉತ್ಪನ್ನದ ಬಿಡುಗಡೆ ಮೂಲಕ ಪಾರ್ಲೆ ಕಂಪನಿಯು ಉತ್ಪನ್ನಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಬ್ರ್ಯಾಂಡೆಡ್ ಗೋಧಿಹಿಟ್ಟಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಸಾಂಕ್ರಾಮಿಕ ಹರಡಿದ ನಂತರದಲ್ಲಿ ಇದಕ್ಕೆ ಬೇಡಿಕೆ ಜಾಸ್ತಿ ಆಗಿದೆ’ ಎಂದು ಪಾರ್ಲೆ ಕಂಪನಿಯ ಹಿರಿಯ ಅಧಿಕಾರಿ ಮಯಾಂಕ್ ಶಾ ಹೇಳಿದ್ದಾರೆ.

ಪಾರ್ಲೆ–ಜಿ ಗೋಧಿ ಹಿಟ್ಟನ್ನು ಈಗ ದೇಶದ ಉತ್ತರ ಹಾಗೂ ಪಶ್ಚಿಮ ಭಾಗಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು