ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶೀಯ ಪ್ರಯಾಣಿಕ ವಾಹನಗಳ ಮಾರಾಟ ಇಳಿಕೆ

Published 10 ಜೂನ್ 2024, 14:50 IST
Last Updated 10 ಜೂನ್ 2024, 14:50 IST
ಅಕ್ಷರ ಗಾತ್ರ

ನವದೆಹಲಿ: ದೇಶೀಯ ಪ್ರಯಾಣಿಕ ವಾಹನಗಳ ಮಾರಾಟ ಪ್ರಮಾಣವು ಮೇ ತಿಂಗಳಲ್ಲಿ ಶೇ 1ರಷ್ಟು ಇಳಿಕೆಯಾಗಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಸೋಮವಾರ ತಿಳಿಸಿದೆ.

ಪ್ರಯಾಣಿಕ ವಾಹನಗಳ ನೋಂದಣಿಯು 3.03 ಲಕ್ಷಕ್ಕೆ ಇಳಿದಿದೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ 3.35 ಲಕ್ಷವಿತ್ತು. 

ಬಿಸಿ ಗಾಳಿ ಮತ್ತು ಚುನಾವಣೆಯ ಪ್ರಭಾವ ಬೇಡಿಕೆ ಮೇಲೆ ಪರಿಣಾಮ ಬೀರಿದ್ದರಿಂದ ಕಳೆದ  ತಿಂಗಳು ವಾಹನಗಳ ಮಾರಾಟದಲ್ಲಿ ಇಳಿಕೆಯಾಗಿದೆ ಎಂದು ಎಫ್‌ಎಡಿಎ ಅಧ್ಯಕ್ಷ ಮನೀಶ್‌ ರಾಜ್‌ ಸಿಂಘಾನಿಯಾ ತಿಳಿಸಿದ್ದಾರೆ.

ಉತ್ತಮ ಪೂರೈಕೆ ಇದ್ದರೂ ಬಾಕಿ ಇರುವ ಬುಕಿಂಗ್‌ಗಳು, ರಿಯಾಯಿತಿ ಯೋಜನೆಗಳು, ಹೊಸ ಮಾದರಿ ವಾಹನಗಳ ಕೊರತೆ, ತೀವ್ರ ಸ್ಪರ್ಧೆ ಮತ್ತು ತಯಾರಕರ ಕಳಪೆ ಮಾರುಕಟ್ಟೆ ಪ್ರಯತ್ನವು ಮಾರಾಟದ ಮೇಲೆ ಪರಿಣಾಮ ಬೀರಿತು. ಹೆಚ್ಚಿನ ಬಿಸಿಲಿನಿಂದ ಷೋರೂಂಗಳಿಗೆ ಭೇಟಿ ನೀಡುವವರ ಸಂಖ್ಯೆಯು ಮೇನಲ್ಲಿ ಶೇ 18ರಷ್ಟು ಕುಸಿಯಿತು ಎಂದು ಹೇಳಿದ್ದಾರೆ.

ಕೆಲವು ಪ್ರದೇಶಗಳಲ್ಲಿ ಉತ್ತಮ ಮಳೆ ಮತ್ತು ಸುಧಾರಿತ ಹಣಕಾಸು ಲಭ್ಯತೆಯಿಂದಾಗಿ ಗ್ರಾಮೀಣ ಬೇಡಿಕೆಯು ಉತ್ತಮಗೊಂಡಿದೆ. ದ್ವಿಚಕ್ರ ವಾಹನಗಳ ಮಾರಾಟವು ಶೇ 2ರಷ್ಟು ಏರಿಕೆಯಾಗಿದ್ದು, 15.34 ಲಕ್ಷ ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಮೇನಲ್ಲಿ 14.97 ಲಕ್ಷ ಮಾರಾಟವಾಗಿದ್ದವು.

ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಶೇ 20ರಷ್ಟು ಏರಿಕೆಯಾಗಿದ್ದು, 98,265 ವಾಹನಗಳು ಮಾರಾಟವಾಗಿವೆ. ವಾಣಿಜ್ಯ ವಾಹನಗಳ ಮಾರಾಟವು 79,807ರಿಂದ 83,059ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರ ರಚನೆಯಾದ ಬಳಿಕ ಸ್ಥಿರತೆ ಮೂಡಲಿದೆ. ಅಲ್ಲದೇ, ಈ ಬಾರಿ ‌ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಆಗುವ ಮುನ್ಸೂಚನೆ ಇದೆ. ಇದು ಗ್ರಾಮೀಣ ಬೇಡಿಕೆಯನ್ನು ಹೆಚ್ಚಿಸಲಿದ್ದು, ಆರ್ಥಿಕ ಚಟುವಟಿಕೆಗಳನ್ನು ಸುಧಾರಿಸಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT