16ರವರೆಗೆ ಪೇಟಿಎಂ ಕ್ಯಾಷ್‌ ಬ್ಯಾಕ್ ಡೇಸ್ ಸಂಭ್ರಮ

7
ಫೋನ್‌ಪೇ: ಬೆಂಗಳೂರಿನಲ್ಲಿ ಸೇವೆ ವಿಸ್ತರಣೆ

16ರವರೆಗೆ ಪೇಟಿಎಂ ಕ್ಯಾಷ್‌ ಬ್ಯಾಕ್ ಡೇಸ್ ಸಂಭ್ರಮ

Published:
Updated:

ಬೆಂಗಳೂರು: ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಹಣ ಪಾವತಿಯನ್ನು ಗ್ರಾಹಕ ಸ್ನೇಹಿಯನ್ನಾಗಿ ಮಾಡಿರುವ ಪೇಟಿಎಂ ಕಂಪನಿಯು,  ಇದೇ 16ರವರೆಗೆ `ಪೇಟಿಎಂ ಕ್ಯಾಷ್‌-ಬ್ಯಾಕ್ ಡೇಸ್’ ಸಂಭ್ರಮ ಹಮ್ಮಿಕೊಂಡಿದೆ.

‘ದೊಡ್ಡ ಮಳಿಗೆಗಳಿಂದ ಹಿಡಿದು ಚಿಕ್ಕಪುಟ್ಟ ಅಂಗಡಿಗಳಲ್ಲೂ ಪೇಟಿಎಂ ಪಾವತಿ ಸೇವೆ ಬಳಕೆಗೆ ಬಂದಿದೆ. ಆನ್-ಲೈನ್ ಅಥವಾ ಆಫ್-ಲೈನ್ ಪಾವತಿಯಲ್ಲಿ ನಮ್ಮ ಗ್ರಾಹಕರಿಗೆ  ಲಾಭ ಸಿಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಖರೀದಿ ಮೊತ್ತ ಆಧರಿಸಿ ಕ್ಯಾಷ್‌ ಬ್ಯಾಕ್‌ ಮೊತ್ತ ನಿಗದಿಪಡಿಸಲಾಗಿದೆ’ ಎಂದು ಸಂಸ್ಥೆಯ ಸಿಒಒ ಕಿರಣ್ ವಸಿರೆಡ್ಡಿ ಹೇಳಿದ್ದಾರೆ.

ಫೋನ್‌ಪೇ: ಬೆಂಗಳೂರಿನಲ್ಲಿ ಸೇವೆ ವಿಸ್ತರಣೆ:  ಬೆಂಗಳೂರು: ಡಿಜಿಟಲ್ ಹಣ ಪಾವತಿ ಸಂಸ್ಥೆಯಾಗಿರುವ ಫೋನ್‌ಪೇ, ಬೆಂಗಳೂರಿನಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಆಫ್‌ಲೈನ್ ವ್ಯಾಪಾರಿಗಳಲ್ಲಿ ತನ್ನ ಸೇವೆ ಒದಗಿಸುತ್ತಿರುವುದಾಗಿ ಪ್ರಕಟಿಸಿದೆ.

ಸಂಘಟಿತ ವಲಯದ ದೊಡ್ಡ ರಿಟೇಲ್‌ ಮಳಿಗೆಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ಮಳಿಗೆಗಳಲ್ಲಿಯೂ  ಫೋನ್‌ಪೇ ಪಾವತಿ ಸೌಲಭ್ಯ ವಿಸ್ತರಣೆಯಾಗಿದೆ. ವ್ಯಾಪಾರಿಗಳು ಡಿಜಿಟಲ್ ಪಾವತಿ  ಸ್ವೀಕರಿಸುವುದನ್ನು ಸುಲಭವಾಗಿಸಲು ಕ್ಯುಆರ್‌ ಕೋಡ್ ಮತ್ತು ಪಿಒಎಸ್‌ ಸಾಧನಗಳು ಸೇರಿದಂತೆ ಸಮಗ್ರ ಪಾವತಿಯ ಸೌಲಭ್ಯವನ್ನೂ ಒದಗಿಸುತ್ತದೆ. ಗ್ರಾಹಕರು  ಫೋನ್‌ಪೇ ಬಳಸಿಕೊಂಡು ಸುಲಭವಾಗಿ ವಹಿವಾಟು ನಡೆಸಬಹುದಾಗಿದೆ ಎಂದು ಸಂಸ್ಥೆಯ ವ್ಯವಹಾರ ಮುಖ್ಯಸ್ಥ ಯುವರಾಜ್ ಸಿಂಗ್ ಶೇಖಾವತ್ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !