ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನಲ್ಲಿ ₹100ರ ಗಡಿ ದಾಟಿದ ಪೆಟ್ರೋಲ್

Last Updated 26 ಜೂನ್ 2021, 9:57 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಶನಿವಾರ ದೇಶದಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು 35 ಪೈಸೆಗಳಷ್ಟು ಹೆಚ್ಚಿಸಿವೆ. ಇದರಿಂದಾಗಿ ತಮಿಳುನಾಡಿನಲ್ಲಿ ಪೆಟ್ರೋಲ್‌ ದರವು ಲೀಟರಿಗೆ ₹ 100ರ ಗಡಿ ದಾಟಿದೆ.

ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಜಮ್ಮು–ಕಾಶ್ಮೀರ, ಒಡಿಶಾ ಮತ್ತು ಲಡಾಖ್‌ನಲ್ಲಿ ಈಗಾಗಲೇ ಪೆಟ್ರೋಲ್‌ ದರವು ಲೀಟರಿಗೆ ₹ 100ರ ಗಡಿ ದಾಟಿ ಮಾರಾಟವಾಗುತ್ತಿದೆ.

ಚೆನ್ನೈನಲ್ಲಿ ಪೆಟ್ರೋಲ್‌ ದರ ₹ 99.19 ಮತ್ತು ಡೀಸೆಲ್‌ ದರ ₹ 93.23ರಷ್ಟಾಗಿದೆ. ಮುಂಬೈನಲ್ಲಿ ಪೆಟ್ರೋಲ್‌ ದರ ₹ 104.22 ಮತ್ತು ಡೀಸೆಲ್‌ ದರ ₹ 96.16ರಷ್ಟಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ₹ 101.39 ಮತ್ತು ಡೀಸೆಲ್‌ ದರ ₹ 93.99ರಕ್ಕೆ ತಲುಪಿದೆ.

ರಾಜಸ್ಥಾನದ ಶ್ರೀಗಂಗಾನಗರ ಮತ್ತು ಹನುಮಾನ್‌ಘರ್ ಹಾಗೂ ಒಡಿಶಾದ ಹಲವು ಭಾಗಗಳಲ್ಲಿ ಡೀಸೆಲ್‌ ದರವೂ ಈಗಾಗಲೇ ಲೀಟರಿಗೆ ₹100ರ ಗಡಿ ದಾಟಿದೆ.

ಮೇ 4ರಿಂದ ಇಲ್ಲಿಯವರೆಗೆ ಒಟ್ಟಾರೆ 30 ಬಾರಿ ಇಂಧನ ದರದಲ್ಲಿ ಹೆಚ್ಚಳ ಮಾಡಲಾಗಿದೆ. ಈ ಅವಧಿಯಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 7.71 ಮತ್ತು ಡೀಸೆಲ್‌ ದರ ಲೀಟರಿಗೆ ₹ 8.12ರಷ್ಟು ಹೆಚ್ಚಳ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT