ಶುಕ್ರವಾರ, ಜೂನ್ 25, 2021
22 °C

ಪೆಟ್ರೋಲ್‌, ಡೀಸೆಲ್ ದರ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಭಾನುವಾರ ಪೆಟ್ರೋಲ್‌ ದರವನ್ನು ಲೀಟರಿಗೆ 24 ಪೈಸೆ ಮತ್ತು ಡೀಸೆಲ್‌ ದರವನ್ನು ಲೀಟರಿಗೆ 27 ಪೈಸೆಯಷ್ಟು ಹೆಚ್ಚಿಸಿವೆ.

ಇದರಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರಿಗೆ ₹ 92.98 ಮತ್ತು ಡೀಸೆಲ್ ದರ ₹ 83.22ಕ್ಕೆ ಏರಿಕೆ ಆಗಿದೆ. ಮುಂಬೈನಲ್ಲಿ ಪೆಟ್ರೋಲ್‌ ₹ 98.88 ಮತ್ತು ಡೀಸೆಲ್‌ ₹ 90.49ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹95.66 ಮತ್ತು ಡೀಸೆಲ್‌ ದರ ₹ 88.22ಕ್ಕೆ ತಲುಪಿದೆ.

ಮೇ 4ರಿಂದ ಇಲ್ಲಿಯವರೆಗೆ ಪೆಟ್ರೋಲ್‌ ದರ ₹ 2.19 ಮತ್ತು ಡೀಸೆಲ್‌ ದರ ₹ 2.49ರಷ್ಟು ಏರಿಕೆ ಆದಂತಾಗಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳ ಹಲವು ನಗರಗಳಲ್ಲಿ ಪೆಟ್ರೋಲ್‌ ದರವು ಈಗಾಗಲೇ ₹ 100ರ ಗಡಿ ದಾಟಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು