ಸೋಮವಾರ, ಫೆಬ್ರವರಿ 24, 2020
19 °C

ಪೆಟ್ರೋಲ್‌ ದರ 7 ತಿಂಗಳ ಹಿಂದಿನ ಮಟ್ಟಕ್ಕೆ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಕೊರೊನಾ ವೈರಸ್‌ ಪರಿಣಾಮವಾಗಿ ಜಾಗತಿಕ ತೈಲ ಬೇಡಿಕೆ ತಗ್ಗಿದೆ. ಇದರಿಂದ ಪೆಟ್ರೋಲ್‌ ದರ ಬುಧವಾರ ಏಳು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ತಿಂಗಳ ಹಿಂದೆ ಪ್ರತಿ ಲೀಟರಿಗೆ ₹78.56 ಇತ್ತು. ಇದು ಬುಧವಾರ ₹74.39ಕ್ಕೆ ಇಳಿಕೆ ಕಂಡಿದೆ. 2019ರ ಜುಲೈ 3 ರಂದು ಲೀಟರಿಗೆ ₹72.83ರಂತೆ ಮಾರಾಟವಾಗಿತ್ತು.

ಡೀಸೆಲ್‌ ದರವೂ ಒಂದು ತಿಂಗಳಿನಲ್ಲಿ ಶೇ 6ರಷ್ಟು ಇಳಿಕೆಯಾಗಿದ್ದು, ಜನವರಿ 11ರಂದು ₹71.48 ಇದ್ದ ದರವು ₹67.07ಕ್ಕೆ ಇಳಿಕೆಯಾಗಿದೆ. ಬ್ರೆಂಟ್‌ ತೈಲ ದರ ಒಂದು ತಿಂಗಳಿನಲ್ಲಿ ಶೇ 21ರಷ್ಟು ಇಳಿಕೆ ಆಗಿದೆ. ಇದರಿಂದ ಇಂಧನ ದರವೂ ಕಡಿಮೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು