ನವದೆಹಲಿ: ಫೋನ್ಪೇ ಕಂಪನಿಯ ಐಪಿಒಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಒಪ್ಪಿಗೆ ನೀಡಿದೆ. ಕಂಪನಿಯು ಶೀಘ್ರದಲ್ಲಿ ಪರಿಷ್ಕೃತ ದಾಖಲೆಗಳನ್ನು (ಯುಡಿಎಚ್ಆರ್ಪಿ) ಸೆಬಿಗೆ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

ಈ ಐಪಿಒ ಮೂಲಕ ಹಾಲಿ ಷೇರುದಾರರು ತಮ್ಮ ಷೇರುಗಳನ್ನು ಮಾರಾಟ ಮಾಡಲಿದ್ದಾರೆ (ಆಫರ್ ಫಾರ್ ಸೇಲ್). ಕಂಪನಿಯು ಸಾರ್ವಜನಿಕರಿಗೆ ಷೇರು ಮಾರಾಟದ (ಐಪಿಒ) ಮೂಲಕ ಯಾವುದೇ ಹೆಚ್ಚುವರಿ ಪ್ರಾಥಮಿಕ ಬಂಡವಾಳ ಸಂಗ್ರಹಿಸುವುದಿಲ್ಲ ಎಂದು ತಿಳಿಸಿವೆ.

ಎನ್ಪಿಸಿಐ ಅಂಕಿ–ಅಂಶದ ಪ್ರಕಾರ ಒಟ್ಟು ಯುಪಿಐ ವಹಿವಾಟಿನಲ್ಲಿ ಫೋನ್ಪೇ ಪಾಲು ಶೇ 45ಕ್ಕಿಂತ ಹೆಚ್ಚಿದೆ. 2025ರ ಡಿಸೆಂಬರ್ ಅಂತ್ಯದ ವೇಳೆಗೆ 980 ಕೋಟಿ ವಹಿವಾಟುಗಳು ನಡೆದಿವೆ. 2024–25ರಲ್ಲಿ ಕಂಪನಿಯ ₹7,115 ಕೋಟಿ ವರಮಾನ ಹೊಂದಿತ್ತು. ಇದು 2023–24ರ ವರಮಾನಕ್ಕೆ ಹೋಲಿಸಿದರೆ ಶೇ 40ರಷ್ಟು ಹೆಚ್ಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.