ನವದೆಹಲಿ: ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ವಿಶೇಷ ರಿಟೇಲ್ ಸಾಲ ಅಭಿಯಾನವನ್ನು ಆರಂಭಿಸಿದೆ.

ಇದರಡಿ ದೇಶದಲ್ಲಿರುವ ಬ್ಯಾಂಕ್ನ ಎಲ್ಲಾ ಶಾಖೆಗಳು, ಡಿಜಿಟಲ್ ವೇದಿಕೆ ಮತ್ತು ಅಧಿಕೃತ ವೆಬ್ಸೈಟ್ ಮೂಲಕ ಗ್ರಾಹಕರಿಗೆ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಜೂನ್ 20ರ ವರೆಗೆ ಈ ಅಭಿಯಾನ ನಡೆಯಲಿದೆ ಎಂದು ಬ್ಯಾಂಕ್ ತಿಳಿಸಿದೆ.

ಗೃಹ ಮತ್ತು ವಾಹನ ಸಾಲಕ್ಕೆ ನಿಗದಿಪಡಿಸಿದ್ದ ಸಂಸ್ಕರಣಾ ಶುಲ್ಕವನ್ನು ಶೂನ್ಯಕ್ಕೆ ಇಳಿಸಿದೆ. ದಾಖಲೆಗಳ ಪರಿಶೀಲನೆಗೆ ನಿಗದಿಪಡಿಸಿರುವ ಶುಲ್ಕಕ್ಕೂ ವಿನಾಯಿತಿ ಘೋಷಿಸಿದೆ.

ಆಸ್ತಿಯೊಂದಿಗೆ ಯಾವುದೇ ಕಾನೂನು ತೊಡಕು ಇಲ್ಲ ಎಂದು ದೃಢೀಕರಿಸುವ ಪ್ರಮಾಣ ಪತ್ರ ಮತ್ತು ಕಾನೂನು ಸಲಹೆಗೆ ನಿಗದಿಪಡಿಸುವ ಶುಲ್ಕಕ್ಕೂ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ.

ಗೃಹ, ಸಾಲ ಮತ್ತು ಶಿಕ್ಷಣ ಸಾಲದ ಮೇಲಿನ ಬಡ್ಡಿ ಮೇಲೆ ಶೇ 0.05ರಷ್ಟು ರಿಯಾಯಿತಿ ಇದೆ. ಈ ಸೌಲಭ್ಯಕ್ಕೆ ಷರತ್ತುಗಳು ಅನ್ವಯಿಸಲಿವೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.