ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಲಾಭ ₹1,159 ಕೋಟಿಗೆ ಏರಿಕೆ

Published : 19 ಮೇ 2023, 15:54 IST
Last Updated : 19 ಮೇ 2023, 15:54 IST
ಫಾಲೋ ಮಾಡಿ
Comments

ನವದೆಹಲಿ: ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ನ (ಪಿಎನ್‌ಬಿ) ನಿವ್ವಳ ಲಾಭವು 2023ರ ಮಾರ್ಚ್‌ ತ್ರೈಮಾಸಿಕದಲ್ಲಿ ಐದು ಪಟ್ಟು ಹೆಚ್ಚಾಗಿ ₹1,159 ಕೋಟಿಗೆ ಏರಿಕೆ ಕಂಡಿದೆ.

ಸುಸ್ತಿ ಸಾಲದ ಪ್ರಮಾಣ ಕಡಿಮೆ ಆಗಿರುವುದು ಹಾಗೂ ಬಡ್ಡಿ ವರಮಾನ ಹೆಚ್ಚಾಗಿರುವುದೇ ಲಾಭದಲ್ಲಿ ಈ ಪ್ರಮಾಣದ ಏರಿಕೆಗೆ ಕಾರಣ ಎಂದು ಬ್ಯಾಂಕ್‌ ತಿಳಿಸಿದೆ. 2022ರ ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ ₹202 ಕೋಟಿ ಇತ್ತು.

ಬ್ಯಾಂಕ್‌ನ ಒಟ್ಟು ವರಮಾನವು ₹21,095 ಕೋಟಿಯಿಂದ ₹27,269 ಕೋಟಿಗೆ ಏರಿಕೆ ಆಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಬಡ್ಡಿ ವರಮಾನ ₹18,645 ಕೋಟಿಯಿಂದ ₹23,849 ಕೋಟಿಗೆ ಏರಿಕೆಯಾಗಿದೆ. ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣವು ಶೇ 11.78 ರಿಂದ ಶೇ 8.74ಕ್ಕೆ ಹಾಗೂ ನಿವ್ವಳ ಎನ್‌ಪಿಎ ಶೇ 4.8ರಿಂದ ಶೇ 2.72ಕ್ಕೆ ಇಳಿಕೆ ಕಂಡಿದೆ.

2022-23ನೇ ಹಣಕಾಸು ವರ್ಷದಲ್ಲಿ ನಿವ್ವಳ ಲಾಭ ಶೇ 27ರಷ್ಟು ಇಳಿಕೆ ಆಗಿದ್ದು ₹2,507ಕ್ಕೆ ತಲುಪಿದೆ. 2021–22ನೇ ಹಣಕಾಸು ವರ್ಷದಲ್ಲಿ ನಿವ್ವಳ ಲಾಭ ₹3,457 ಕೋಟಿ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT