ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ,1ರಿಂದ ಬದಲಾಗಲಿದೆ ಚೆಕ್ ಮೂಲಕ ಹಣ ಪಾವತಿಸುವ ನಿಯಮ

Last Updated 14 ಡಿಸೆಂಬರ್ 2020, 13:17 IST
ಅಕ್ಷರ ಗಾತ್ರ

ಚೆಕ್ ಮೂಲಕ ಹಣ ಪಾವತಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ `ಪಾಸಿಟಿವ್ ಪೇ ಸಿಸ್ಟಂ' ಪರಿಚಯಿಸಿದ್ದು, ಈ ಹೊಸ ನಿಯಮ ಜನವರಿ 1ರಿಂದ ಜಾರಿಗೆ ಬರಲಿದೆ. ಇದರನ್ವಯ ಚೆಕ್ ಮೂಲಕ ₹50,000ಕ್ಕೂ ಅಧಿಕ ಪ್ರಮಾಣದ ಹಣ ಪಾವತಿ ಮಾಡುವವರು ಕೆಲವು ಪ್ರಮುಖ ಮಾಹಿತಿಗಳನ್ನು ಸಂಬಂಧಪಟ್ಟ ಬ್ಯಾಂಕಿಗೆ ಸಲ್ಲಿಸಿ ಮರು ಧೃಡೀಕರಿಸಬೇಕಿದೆ.

ಚೆಕ್ ಮೂಲಕ ಹಣ ಪಾವತಿಯಲ್ಲಿ ನಡೆಯುತ್ತಿದ್ದ ವಂಚನೆ ತಪ್ಪಿಸುವ ದೃಷ್ಟಿಯಿಂದ ಪಾಸಿಟಿವ್ ಪೇ ಸಿಸ್ಟಂ ರೂಪಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಸಂಬಂಧಪಟ್ಟ ಬ್ಯಾಂಕ್, ಹಣ ಪಾವತಿಗೆ ಸಲ್ಲಿಸಿದ ಚೆಕ್‌ನ ದಿನಾಂಕ, ಸಂಖ್ಯೆ, ಚೆಕ್ ಪಡೆದವರ ಹೆಸರು, ಖಾತೆ ಸಂಖ್ಯೆ, ಚೆಕ್‌ನ ಮೊತ್ತ ಇತರೆ ಮಾಹಿತಿಗಳನ್ನ ಮರು ಧೃಡೀಕರಣದ ಮೂಲಕ ಖಚಿತಪಡಿಸಿಕೊಳ್ಳುತ್ತದೆ.

ಜನವರಿ 1ರಿಂದ ಜಾರಿಗೆ ಬರಲಿರುವ ಪಾಸಿಟಿವ್ ಪೇ ಸಿಸ್ಟಂ ನಿಯಮಗಳು

* ಪಾಸಿಟಿವ್ ಪೇ ಸಿಸ್ಟಂ ಮೂಲಕ ಅಧಿಕ ಮೊತ್ತದ ಚೆಕ್‌ಗಳ ಪ್ರಮುಖ ಮಾಹಿತಿಗಳ ಮರು ಧೃಡೀಕರಣ ಮಾಡಲಾಗುತ್ತದೆ.

* ಅಂದರೆ ಚೆಕ್ ನೀಡಿದವರು, ಚೆಕ್ ಪಡೆದವರ ಹೆಸರು, ಮೊತ್ತದ ಮಾಹಿತಿಯನ್ನ ಎಸ್ಎಂಎಸ್, ಮೊಬೈಲ್ ಆಪ್, ಇಂಟರ್ನೆಟ್ ಬ್ಯಾಂಕ್, ಎಟಿಎಂ ಮೂಲಕ ಬ್ಯಾಂಕಿಗೆ ಸಲ್ಲಿಸಬೇಕಾಗುತ್ತದೆ.

* ಚೆಕ್‌ ಪಡೆದವರು ಹಣ ಪಡೆಯಲು ಬಂದಾಗ ಚೆಕ್ ನೀಡಿದವರು ಸಲ್ಲಿಸಿದ ಮಾಹಿತಿಯನ್ನ ತಾಳೆ ಹಾಕಲಾಗುತ್ತದೆ. ಒಂದೊಮ್ಮೆ, ಬ್ಯಾಂಕಿಗೆ ಸಲ್ಲಿಸಿದ ಮಾಹಿತಿ ತಾಳೆ ಆಗದಿದ್ದರೆ ಹಣ ಪಾವತಿಯಾಗುವುದಿಲ್ಲ.

* ಪಾಸಿಟಿವ್ ಪೇ ಸಿಸ್ಟಂ ಖಾತೆದಾರರ ವಿವೇಚನೆಗೆ ಬಿಟ್ಟದಾಗಿದ್ದು, ಖಾತೆದಾರರಿಗೆ ಅಗತ್ಯ ಎನಿಸಿದರೆ ಸಕ್ರಿಯಗೊಳಿಸಿಕೊಳ್ಳಬಹುದು. ಆದರೆ, ₹5,00,000 ವರೆಗಿನ ಚೆಕ್‌ಗಳಿಗೆ ಪಾಸಿಟಿವ್ ಪೇ ಸಿಸ್ಟಂ ಕಡ್ಡಾಯಗೊಳಿಸುವ ಅಧಿಕಾರ ಬ್ಯಾಂಕ್‌ಗಳಿಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT