ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ವಲಯ: 3.5 ಕೋಟಿ ಟನ್‌ ಕಲ್ಲಿದ್ದಲು ಆಮದು

Published 12 ಡಿಸೆಂಬರ್ 2023, 16:04 IST
Last Updated 12 ಡಿಸೆಂಬರ್ 2023, 16:04 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಅಕ್ಟೋಬರ್‌ ಅವಧಿಯಲ್ಲಿ ದೇಶೀಯ ವಿದ್ಯುತ್‌ ವಲಯವು 3.53 ಕೋಟಿ ಟನ್‌ನಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ.

ಆಮದು ಕಲ್ಲಿದ್ದಲು ಆಧಾರಿತವಾಗಿ ನಡೆಯುವ ವಿದ್ಯುತ್‌ ಸ್ಥಾವರಗಳು 2.17 ಕೋಟಿ ಟನ್‌ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿವೆ ಎಂದು ಕೇಂದ್ರ ಸಚಿವ ಆರ್.ಕೆ. ಸಿಂಗ್‌ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಥರ್ಮಲ್‌ ಘಟಕಗಳು 1.36 ಕೋಟಿ ಟನ್‌ನಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಂಡಿವೆ ಎಂದು ಹೇಳಿದ್ದಾರೆ.

2022–23ರ ಹಣಕಾಸು ವರ್ಷದಲ್ಲಿ ಒಟ್ಟು  5.56 ಕೋಟಿ ಟನ್‌ ಆಮದು ಮಾಡಿಕೊಳ್ಳಲಾಗಿತ್ತು. ಇದರಲ್ಲಿ ಆಮದು ಆಧಾರಿತ ಸ್ಥಾವರಗಳು 2.05 ಕೋಟಿ ಟನ್‌ ಮತ್ತು ಉಳಿದ 3.51 ಕೋಟಿ ಟನ್‌ ಕಲ್ಲಿದ್ದಲ್ಲನ್ನು ಥರ್ಮಲ್‌ ಸ್ಥಾವರಗಳು ಆಮದು ಮಾಡಿಕೊಂಡಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT