ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಂಜಾಬ್‌ ಮಂಚ್‌’ ಸ್ಥಾಪಿಸಿದ ಎಎಪಿ ಉಚ್ಚಾಟಿತ ಸಂಸದ

Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಚಂಡಿಗಡ: ಆಮ್‌ ಆದ್ಮಿ ಪಕ್ಷದಿಂದ (ಎಎಪಿ) ಉಚ್ಚಾಟನೆಯಾಗಿರುವ ಸಂಸದ ಧರ್ಮವೀರ್‌ ಗಾಂಧಿ ಅವರು ‘ಪಂಜಾಬ್‌ ಮಂಚ್‌’ ಸಂಘಟನೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ರಾಜಕೀಯ ‍ಪಕ್ಷದ ರೂಪ ನೀಡಿ, 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದು ಎಂದಿದ್ದಾರೆ.

ರಾಜ್ಯಕ್ಕೆ ಇನ್ನಷ್ಟು ವಿದ್ಯುತ್‌ ಪೂರೈಸಬೇಕು ಎಂದು ಆಗ್ರಹಿಸಿರುವ ಗಾಂಧಿ, ಪಂಜಾಬ್‌ ಹಿತಾಸಕ್ತಿ ಕಾಪಾಡುವಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಶಿರೋಮಣಿ ಅಕಾಲಿದಳ ಪಕ್ಷಗಳು ವಿಫಲವಾಗಿವೆ ಎಂದು ಆರೋಪಿಸಿದ್ದಾರೆ.

ಎಎಪಿಯು ಹೈಕಮಾಂಡ್‌ ಸಂಸ್ಕೃತಿಗೆ ಒಗ್ಗಿಕೊಂಡಿದ್ದು, ರಾಜ್ಯದ ನಾಯಕರನ್ನು ಕಡೆಗಣಿಸುತ್ತಿದೆ ಎಂದೂ ಕಿಡಿಕಾರಿದ್ದಾರೆ.

ಮಂಚ್‌ಗೆ ಪ್ರಾದೇಶಿಕ ರೂಪ ಸಿಕ್ಕ ನಂತರ ‘ನಾನು ಎಎಪಿ ತೊರೆಯುತ್ತೇನೆ. ಇದರ ಮೂಲಕವೇ ಲೋಕಸಭಾ ಚುನಾವಣೆ ಎದುರಿಸುತ್ತೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT