ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಯಿಂದ ಟಿ.ವಿ, ಫ್ರಿಜ್ ಬೆಲೆಯಲ್ಲಿ ಶೇ.10ರಷ್ಟು ಹೆಚ್ಚಳ ಸಾಧ್ಯತೆ

Last Updated 28 ಡಿಸೆಂಬರ್ 2020, 3:18 IST
ಅಕ್ಷರ ಗಾತ್ರ

ನವದೆಹಲಿ: ಎಲ್‌ಇಡಿ ಟಿ.ವಿ., ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಬೆಲೆಯು ಜನವರಿಯಿಂದ ಸರಿಸುಮಾರು ಶೇಕಡ 10ರಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ. ಇವುಗಳ ತಯಾರಿಕೆಯಲ್ಲಿ ಬಳಸಲಾಗುವ ವಸ್ತುಗಳ ಬೆಲೆಯಲ್ಲಿ ಹಾಗೂ ಸಾಗಣೆ ವೆಚ್ಚದಲ್ಲಿ ಆಗಿರುವ ಏರಿಕೆಯ ಪರಿಣಾಮ ಇದು ಎನ್ನಲಾಗಿದೆ.

ಬೆಲೆ ಹೆಚ್ಚಳವು ಶೀಘ್ರದಲ್ಲೇ ಆಗಲಿದೆ, ಬೆಲೆ ಹೆಚ್ಚಳ ತಡೆಯಲು ಆಗುವುದಿಲ್ಲ ಎಂದು ಎಲೆಕ್ಟ್ರಾನಿಕ್ ಉಪಕರಣಗಳ ತಯಾರಕ ಕಂಪನಿಗಳಾದ ಎಲ್‌ಜಿ, ಪ್ಯಾನಾಸೋನಿಕ್ ಮತ್ತು ಥಾಮ್ಸನ್ ಹೇಳಿವೆ. ಸೋನಿ ಕಂಪನಿಯು ಬೆಲೆ ಹೆಚ್ಚಳದ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಆದರೆ, ಬೆಲೆ ಹೆಚ್ಚಿಸುವ ಸಾಧ್ಯತೆ ಇದೆ ಎಂಬ ಸೂಚನೆಯನ್ನು ಸೋನಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT