ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆ ಹಾದಿಯಲ್ಲಿ ರಿಯಲ್‌ ಎಸ್ಟೇಟ್‌

Last Updated 10 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಪ್ರಮುಖ ರಿಯಲ್‌ ಎಸ್ಟೇಟ್‌ ಸಂಸ್ಥೆಯಾಗಿರುವ ಪುರವಂಕರ ಗ್ರೂಪ್‌ನ ಅಂಗಸಂಸ್ಥೆ ಪ್ರಾವಿಡೆಂಟ್‌ ಹೌಸಿಂಗ್‌, ಪ್ರೀಮಿಯಂ ಅಫೊರ್ಡೆಬಲ್‌ ವಸತಿ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿ ಖರೀದಿದಾರರ ಅಗತ್ಯಗಳನ್ನೆಲ್ಲ ಪೂರೈಸುತ್ತಿದೆ.

ಒಂದು ವರ್ಷದ ಹಿಂದೆ ದೇಶಿ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಕಠಿಣ ಪರಿಸ್ಥಿತಿ ಇತ್ತು. ಈಗ ಕ್ರಮೇಣ ಪರಿಸ್ಥಿತಿಯು ಸುಧಾರಿಸುತ್ತಿದೆ. ಮಾರುಕಟ್ಟೆಯಲ್ಲಿ ಖರೀದಿದಾರರ ಕೊರತೆ ಏನೂ ಇಲ್ಲ. ಈ ವಲಯವು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಎದುರಿಸುತ್ತಿರುವ ನಗದು ಬಿಕ್ಕಟ್ಟು, ಬೇಡಿಕೆ ಕುಸಿತದಂತಹ ವಿದ್ಯಮಾನಗಳಿಂದಲೂ ಪಾಠ ಕಲಿತು ಮುನ್ನಡೆಯುತ್ತಿದೆ. ಆದರೆ, ಅತ್ಯುತ್ತಮ ಮನೆಗಳ ಲಭ್ಯತೆ ಕೊರತೆ ಇದ್ದೇ ಇದೆ. ಬೆಂಗಳೂರಿನ ಪ್ರಮುಖ ರಿಯಲ್‌ ಎಸ್ಟೇಟ್‌ ಸಂಸ್ಥೆಯಾಗಿರುವ ಪುರವಂಕರ ಗ್ರೂಪ್‌ನ ಅಂಗಸಂಸ್ಥೆಯಾಗಿರುವ ಪ್ರಾವಿಡೆಂಟ್‌ ಹೌಸಿಂಗ್‌, ಪ್ರೀಮಿಯಂ ಅಫೊರ್ಡೆಬಲ್‌ ವಸತಿ ಯೋಜನೆಗಳನ್ನು ಕಾರ್ಯಗತಗೊಳಿಸಿ ಖರೀದಿದಾರರ ಅಗತ್ಯಗಳನ್ನೆಲ್ಲ ಪೂರೈಸುತ್ತಿದೆ.

‘ದೇಶಿ ವಸತಿ ನಿರ್ಮಾಣ ವಲಯವು ಬೇಡಿಕೆ ಕೊರತೆಯ ಅನಿಶ್ಚಿತತೆಯಿಂದ ಕ್ರಮೇಣ ಹೊರ ಬರುತ್ತಿದೆ. ಅದೊಂದು ತಾತ್ಕಾಲಿಕ ವಿದ್ಯಮಾನವಾಗಿತ್ತು. ರಿಯಲ್‌ ಎಸ್ಟೇಟ್‌ ವಲಯಕ್ಕೆ ಸರ್ಕಾರ ನೀಡಿರುವ ಕೆಲ ಉತ್ತೇಜನಾ ಕೊಡುಗೆಗಳಿಂದ ಖರೀದಿ ಬೇಡಿಕೆಯಲ್ಲಿ ಚೇತರಿಕೆ ಕಂಡು ಬರುತ್ತಿದೆ. ಹಣಕಾಸು ಪರಿಸ್ಥಿತಿ ಕುರಿತ ಗ್ರಾಹಕರ ಮನಸ್ಥಿತಿಯಲ್ಲಿಯೂ ಸಕಾರಾತ್ಮಕ ಬದಲಾವಣೆ ಕಂಡು ಬರುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಬ್ಯಾಂಕ್‌ಗಳಿಂದ ಹಣ ಹಿಂದೆ ಪಡೆಯುವವರ ಸಂಖ್ಯೆ ಕಡಿಮೆ ಇತ್ತು. ಅದಕ್ಕೆ ಹೋಲಿಸಿದರೆ ನಂತರದ ಎರಡು ತಿಂಗಳಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿದೆ. ಈ ವಲಯಕ್ಕೆ ನೆರವು ನೀಡಲು ಸರ್ಕಾರ ಘೋಷಿಸಿರುವ ಕೆಲ ಉತ್ತೇಜನಾ ಕೊಡುಗೆಗಳ ಫಲವಾಗಿ ವಸತಿ ಯೋಜನೆಗಳ ಫ್ಲ್ಯಾಟ್‌ಗಳ ಖರೀದಿ ಪ್ರಕ್ರಿಯೆಯು ಕ್ರಮೇಣ ಚುರುಕಾಗುತ್ತಿದೆ. ಖರೀದಿದಾರರಲ್ಲಿ ಬೇಡಿಕೆ ಪ್ರವೃತ್ತಿ ಹೆಚ್ಚುತ್ತಿದೆ. ಇದರಿಂದ ಒಟ್ಟಾರೆಯಾಗಿ ದೇಶಿ ರಿಯಲ್‌ ಎಸ್ಟೇಟ್‌ ಉದ್ದಿಮೆಯು ನಿಧಾನವಾಗಿ ಚೇತರಿಕೆಯ ಹಾದಿಗೆ ಮರಳುತ್ತಿದೆ’ ಎಂದು ಪ್ರಾವಿಡೆಂಟ್‌ ಹೌಸಿಂಗ್‌ ಲಿಮಿಟೆಡ್‌ನ ಅಧ್ಯಕ್ಷ ಅವಿನಾಶ್‌ ರಾವ್‌ ಅವರು ಇತ್ತೀಚಿನ ಬೆಳವಣಿಗೆಗಳನ್ನು ವಿಶ್ಲೇಷಿಸುತ್ತಾರೆ.

‘ಸಂಸ್ಥೆ ನಿರ್ಮಿಸಿದ ವಸತಿ ಯೋಜನೆಗಳ ಒಟ್ಟಾರೆ ಮಾರಾಟ ಉತ್ತಮವಾಗಿದೆ. ಅಗ್ಗದ ಗೃಹ ಸಾಲ, ಜಿಎಸ್‌ಟಿ ರಿಯಾಯ್ತಿ ಮತ್ತು ಕೇಂದ್ರ ಸರ್ಕಾರ ಪ್ರಕಟಿಸಿರುವ ಅನೇಕ ಉತ್ತೇಜನಾ ಕೊಡುಗೆಗಳು ಗ್ರಾಹಕರ ಖರೀದಿ ಮನೋಭಾವಕ್ಕೆ ಉತ್ತೇಜನ ನೀಡುತ್ತಿವೆ. ಬೆಂಗಳೂರಿನಲ್ಲಿ ಅಫೊರ್ಡೆಬಲ್‌ ಹೌಸಿಂಗ್‌ (ಕೈಗೆಟುಕುವ ಬೆಲೆ) ಪರಿಕಲ್ಪನೆಯನ್ನು ಜಾರಿಗೊಳಿಸುವ ದಿಸೆಯಲ್ಲಿ ಪ್ರಾವಿಡೆಂಟ್‌ ಹೌಸಿಂಗ್‌ ಮುಂಚೂಣಿಯಲ್ಲಿದೆ. ’ಕೈಗೆಟುಕುವ ಬೆಲೆ‘ ಎನ್ನುವ ಪರಿಕಲ್ಪನೆ ಕಾಲ ಕಾಲಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಪ್ರತಿಯೊಬ್ಬರ ವಾರ್ಷಿಕ ಆದಾಯ ಆಧರಿಸಿ ’ಕೈಗೆಟುಕುವ ಬೆಲೆ‘ಯ ವ್ಯಾಖ್ಯಾನ ವ್ಯತ್ಯಾಸವಾಗುತ್ತದೆ. ಕೆಲ ವರ್ಷಗಳ ಹಿಂದೆ ₹ 40 ಲಕ್ಷಕ್ಕೆ ಇದ್ದ ’ಕೈಗೆಟುಕುವ ಬೆಲೆ‘, ಈಗ ₹ 75 ಲಕ್ಷದವರೆಗೆ ತಲುಪಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ₹ 45 ಲಕ್ಷಕ್ಕಿಂತ ಕಡಿಮೆ ವೆಚ್ಚದ ಮನೆಗಳಿಗೆ ’ಅಫೊರ್ಡೆಬಲ್‌ ಹೌಸ್‌‘ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.

‘ಪ್ರಾವಿಡೆಂಟ್ ಹೌಸಿಂಗ್‌, ಪ್ರೀಮಿಯರ್ ಅಫೊರ್ಡೆಬಲ್‌ ಹೌಸಿಂಗ್‌ ಯೋಜನೆಗಳನ್ನು ಕಾರ್ಯಗತಗೊಳಿಸಲು ಒತ್ತು ನೀಡಿದೆ. ಅಫೊರ್ಡೆಬಲ್‌ ಎನ್ನುವುದು ಅಗ್ಗದ ಮನೆ ಎನ್ನುವ ಭಾವನೆಯೂ ಸರಿಯಲ್ಲ. ಬೆಂಗಳೂರಿನ ಗ್ರಾಹಕರು ಅಗ್ಗದ ಸರಕಿನ ಬದಲಿಗೆ ಬ್ರ್ಯಾಂಡೆಡ್‌ ಸರಕುಗಳ ಬಳಕೆಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಗುಣಮಟ್ಟದ ಜತೆ ಅವರು ಎಂದಿಗೂ ರಾಜಿಯೂ ಆಗುವುದಿಲ್ಲ. ಫ್ಲ್ಯಾಟ್‌ ಖರೀದಿಯಲ್ಲಿಯೂ ಅವರಲ್ಲಿ ಇದೇ ಪ್ರವೃತ್ತಿ ಇದೆ. ಖರೀದಿದಾರರ ಈ ಬಗೆಯ ಇಷ್ಟಾನಿಷ್ಟಗಳನ್ನು ಪರಿಗಣಿಸಿಯೇ ಪ್ರೀಮಿಯಂ ಅಫೊರ್ಡೆಬಲ್‌ ವಸತಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯೂ ದೊರೆಯುತ್ತಿದೆ.

‘ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿನ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಉದ್ದೇಶಕ್ಕೆ ಮನೆ ಖರೀದಿಸುವವರಿಗಿಂತ ಸ್ವಂತದ ವಾಸಕ್ಕೆ ಖರೀದಿಸುವವರ (End Users) ಸಂಖ್ಯೆಯೇ ಹೆಚ್ಚು. ಸಂಸ್ಥೆ ಅಭಿವೃದ್ಧಿಪಡಿಸಿರುವ ವಸತಿ ಯೋಜನೆಗಳು ಆಕರ್ಷಕ ಬೆಲೆಗೆ ದೊರೆಯುತ್ತಿವೆ. ಪ್ರೀಮಿಯಂ ಅಫೊರ್ಡೆಬಲ್‌ ವಸತಿ ಯೋಜನೆಗಳಲ್ಲಿ ಅತ್ಯುತ್ತಮ ಸೌಲಭ್ಯ ಮತ್ತು ವಿಶೇಷ ಅನುಭವವನ್ನೂ ಒದಗಿಸಲಾಗುತ್ತಿದೆ. ಗ್ರಾಹಕರು ನೀಡಿದ ಹಣಕ್ಕೆ ತಕ್ಕ ಮೌಲ್ಯ ಒದಗಿಸುವುದು. ಗೃಹ ಖರೀದಿದಾರರ ಅಗತ್ಯಗಳನ್ನೆಲ್ಲ ಈಡೇರಿಸುವುದು ನಮ್ಮ ಮುಖ್ಯ ಧ್ಯೇಯವಾಗಿದೆ.

‘ನಗರದಲ್ಲಿನ ಮನೆ ಖರೀದಿದಾರರು ತುಂಬ ಜಾಣರು. ಅವರು ಸಾಕಷ್ಟು ಪ್ರವಾಸ ಮಾಡುತ್ತಾರೆ. ಇದರಿಂದ ದೇಶ – ವಿದೇಶಗಳಲ್ಲಿನ ಆಧುನಿಕ ಜೀವನಶೈಲಿಯ ನೇರ ಪರಿಚಯ ಅವರಿಗೆ ಇದೆ. ವಿದೇಶಗಳಲ್ಲಿ ಲಭ್ಯ ಇರುವ ಕಟ್ಟಡ ನಿರ್ಮಾಣದ ಅತ್ಯಾಧುನಿಕ ತಂತ್ರಜ್ಞಾನ, ಥೀಮ್ಸ್‌ ಬೇಸ್ಡ್‌ ವಸತಿ ಸೌಲಭ್ಯಗಳು ತಮಗೂ ಬೇಕು ಎನ್ನುವುದು ಅವರ ನಿರೀಕ್ಷೆಗಳಾಗಿವೆ. ನಾವು ಇಂತಹ ಖರೀದಿದಾರರ ಅಗತ್ಯಗಳನ್ನೆಲ್ಲ ಪೂರೈಸುತ್ತಿದ್ದೇವೆ‘ ಎಂದು ಅವಿನಾಶ್‌ ರಾವ್‌ ಹೇಳುತ್ತಾರೆ.

ಬೆಂಗಳೂರಿನ ಕನಕಪುರ, ಮೈಸೂರು ರಸ್ತೆ ಮತ್ತು ವೈಟ್‌ಫೀಲ್ಡ್‌ಗಳಲ್ಲಿ ಹಮ್ಮಿಕೊಂಡಿರುವ ಯೋಜನೆಗಳು ಯಶಸ್ವಿಯಾಗಿವೆ. ಕಂಪನಿಯು ಮುಂಬರುವ ದಿನಗಳಲ್ಲಿ ಅಭಿವೃದ್ಧಿಪಡಿಸಿದ ಫ್ಲ್ಯಾಟ್‌ಗಳನ್ನೂ ಮಾರಾಟ ಮಾಡಲಿದೆ. ಹೊಸೂರು ರಸ್ತೆಯಲ್ಲಿನ ನಾರಾಯಣ ಹೃದಯಾಲಯದ ಬಳಿ ಈ ಯೋಜನೆ ಜಾರಿಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT