ಬುಧವಾರ, ಸೆಪ್ಟೆಂಬರ್ 22, 2021
25 °C
ಫೆಬ್ರುವರಿ 10 ವಿಶ್ವ ಬೇಳೆಕಾಳು ದಿನ

ಉತ್ಪಾದನೆ ಸ್ವಾವಲಂಬನೆಯತ್ತ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಬೇಳೆಕಾಳು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ದೇಶವು ಸಾಗುತ್ತಿದೆ’ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ತಿಳಿಸಿದ್ದಾರೆ.

‘ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮತ್ತು ರೈತರಿಗೆ ನೆರವಾಗಲು ಬೇಳೆಕಾಳುಗಳನ್ನು ಸಂಗ್ರಹಿಸುವುದು ಸೇರಿದಂತೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.

‘ವಿಶ್ವ ಬೇಳೆಕಾಳು ದಿನ ಆಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತವಷ್ಟೇ ಅಲ್ಲದೆ, ಬೇರೆ ದೇಶಗಳಲ್ಲಿಯೂ ಬೇಳೆಕಾಳು ಅಗತ್ಯವಾಗಿದೆ.

‘ಈ ಹಿಂದೆ ಭಾರಿ ಪ್ರಮಾಣದಲ್ಲಿ ಕೊರತೆ ಎದುರಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದೆ. ಕೃಷಿ ಸಂಶೋಧನೆಗಳ ಸಮಿತಿಯಲ್ಲಿ  (ಐಸಿಎಆರ್‌) ನಡೆಯುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಸೂಕ್ತವಾದ ನೀತಿಗಳಿಂದಾಗಿ ಕೆಲವು ವರ್ಷಗಳಿಂದ ಬೇಳೆಕಾಳು ಉತ್ಪಾದನೆಯಲ್ಲಿ ಹೆಚ್ಚಳ ಸಾಧ್ಯವಾಗಿದೆ’ ಎಂದು ಅವರು ಹೇಳಿದ್ದಾರೆ.

‘ಸದ್ಯದ ಮಟ್ಟಿಗೆ, ದೇಶಿ ಮಾರುಕಟ್ಟೆಯ ಬೇಡಿಕೆಯ ಗರಿಷ್ಠ ಪ್ರಮಾಣವನ್ನು ಈಡೇರಿಸುವಷ್ಟು ಉತ್ಪಾದನೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ಪಾದನೆಯಲ್ಲಿ ಇನ್ನಷ್ಟು ಏರಿಕೆಯಾಗುವಂತೆ ಮಾಡಿ ಜಾಗತಿಕ ಬೇಡಿಕೆಯನ್ನೂ ಈಡೇರಿಸಲಾಗುವುದು’ ಎಂದು ತಿಳಿಸಿದ್ದಾರೆ.

‘ಜಾಗತಿಕ ಮಾರುಕಟ್ಟೆಯ ಬೇಡಿಕೆ ಈಡೇರಿಸಲು ಇಳುವರಿ ಮಟ್ಟದಲ್ಲಿ ಸುಧಾರಣೆ ಆಗಬೇಕಿದೆ. ಸದ್ಯದ ಇರುವ ಇಳುವರಿಯು  1965ರ ಹಸಿರು ಕ್ರಾಂತಿಗಿಂತಲೂ ಮುಂಚೆ ಇದ್ದ ಇಳುವರಿಗಿಂತಲೂ ಕಡಿಮೆ ಇದೆ’ ಎಂದು ನೀತಿ ಆಯೋಗದ ಸದಸ್ಯ, ರಮೇಶ್‌ ಚಂದ ಅವರು ಹೇಳಿದ್ದಾರೆ.

***

ಸಂಶೋಧನೆ ಮತ್ತು ಅಭಿವೃದ್ಧಿ ಬಲಪಡಿಸುವುದು, ಉತ್ಪಾದನೆ ಹೆಚ್ಚಳ, ವ್ಯಾಪಾರ ನೀತಿಗಳಲ್ಲಿ ಬದಲಾವಣೆ, ಖಾಸಗಿ ಹೂಡಿಕೆ ಹೆಚ್ಚಿಸುವುದು ಹಾಗೂ ಪರ್ಯಾಯ ಬೆಳೆ ಬೆಳೆದಾಗಲೂ ಫಸಲಿನ ಇಳುವರಿ ಕಡಿಮೆಯಾದಂತೆ ನೋಡಿಕೊಳ್ಳುವುದು ಅಗತ್ಯವಿದೆ

–ರಮೇಶ್‌ ಚಂದ, ನೀತಿ ಆಯೋಗದ ಸದಸ್ಯ

ಹೆಚ್ಚುವರಿ ಉತ್ಪಾದನೆಯಿಂದ ನೆರೆಯ ದೇಶಗಳಾದ ಶ್ರೀಲಂಕಾ, ನೇಪಾಳ ಮತ್ತು ಬಾಂಗ್ಲಾದೇಶದ ಬೇಳೆಕಾಳು ಬೇಡಿಕೆಗಳನ್ನು ಈಡೇರಿಸಬಹುದು

–ಎಸ್‌.ಕೆ. ಸಿಂಗ್‌, ನಾಫೆಡ್‌ನ ಹೆಚ್ಚುವರಿ ವ್ಯವಸ್ಥಾಪಕ ನಿರ್ದೇಶಕ 

***

ಅಂಕಿ–ಅಂಶ

* 2.34 ಕೋಟಿ ಟನ್‌ :  2018–19 ರಲ್ಲಿ ಸಂಗ್ರಹವಾದ ಬೇಳೆಕಾಳುಗಳು

* 2.6 ರಿಂದ –2.7 ಕೋಟಿ ಟನ್‌ : ದೇಶಿದ ವಾರ್ಷಿಕ ಬೇಡಿಕೆ

* 2.63 ಕೋಟಿ ಟನ್‌ : ಪ್ರಸಕ್ತ ವರ್ಷದಲ್ಲಿ ಉತ್ಪಾದನೆ ಅಂದಾಜು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು