ಗುರುವಾರ , ನವೆಂಬರ್ 14, 2019
22 °C

ಪ್ರಶ್ನೋತ್ತರ

Published:
Updated:

ಡಿ. ಗಂಗಾಧರಪ್ಪ, ದಾವಣಗೆರೆ
ನಾನು ನಿವೇಶನ ಮಾರಾಟ ಮಾಡಿದ್ದೇನೆ. ಬಂಡವಾಳ ವೃದ್ಧಿ ತೆರಿಗೆ ಉಳಿಸಲು ಸರ್ಕಾರಿ ಬಾಂಡ್‌ ವಿಚಾರದಲ್ಲಿ ಹಾಗೂ ದೊರೆಯುವ ಸ್ಥಳ ತಿಳಿಸಿ.

ಉತ್ತರ: ಗರಿಷ್ಠ ₹ 50 ಲಕ್ಷ ಇಲ್ಲಿ ಹೂಡಿಕೆ ತೆರಿಗೆ ಕಡಿಮೆ ಮಾಡಿಕೊಳ್ಳಬಹುದು. ನ್ಯಾಷನಲ್‌ ಹೈವೆ ಅಥಾರಿಟಿ ಅಥವಾ ರೂರಲ್‌ ಎಲೆಕ್ಟ್ರಿಫಿಕೇಷನ್‌ ಇಲ್ಲಿ 5 ವರ್ಷಗಳ ಅವಧಿಗೆ ಹೂಡಬಹುದು. ಬಡ್ಡಿಯನ್ನು ವಾರ್ಷಿಕವಾಗಿ ಪಡೆಯಬಹುದು. ಬಡ್ಡಿದರ ಶೇ 5.25. ದಾವಣಗೆರೆಯಲ್ಲಿ ಆರ್ಥಿಕ ಸಲಹೆಗಾರರು–ಚಾರ್ಟರ್ಡ್‌ ಅಕೌಂಟಂಟ್‌ ಬಳಿ ವಿಚಾರಿಸಿ.

***
ಹೆಸರು, ಊರು ಬೇಡ
ನನ್ನ ವಯಸ್ಸು 67. ರಾಜ್ಯ ಸರ್ಕಾರದ ನಿವೃತ್ತ ನೌಕರ. ನಿಮ್ಮ ಅಂಕಣದಲ್ಲಿ ₹ 50,000 ಠೇವಣಿ ಬಡ್ಡಿ ಹಾಗೂ ಸ್ಟ್ಯಾಂಡರ್ಡ್ ಡಿಡಕ್ಷನ್ ₹ 40,000 ತಿಳಿಸಿದ್ದೀರಿ. ನನಗೆ ಈ ಕೆಳಗಿನ ಆದಾಯವಿದೆ. ತೆರಿಗೆ ಬರುತ್ತದೆಯೇ ರಿಟರ್ನ್ ತುಂಬಬೇಕೇ ತಿಳಿಸಿರಿ.

ಉತ್ತರ: ಆದಾಯ ಪಿಂಚಣಿ- ₹31,19,49
ಬ್ಯಾಂಕ್ ಠೇವಣಿ– ಅಂಚೆ ಕಚೇರಿ ಠೇವಣಿ ಬಡ್ಡಿ- ₹27,78,837
ಒಟ್ಟು ಆದಾಯ- ₹5,89,786
ವಿನಾಯ್ತಿಗಳು
ತೆರಿಗೆ ಆದಾಯದ ಮಿತಿ– ₹3,00,000
ಸೆಕ್ಷನ್ 80ಸಿ- ₹1,50,000
ಸ್ಟ್ಯಾಂಡರ್ಡ್‌ ಡಿಡಕ್ಷನ್ sec16- ₹40,000
ಬಡ್ಡಿ ಸೆಕ್ಷನ್ 80TTB-  ₹50,000
ಒಟ್ಟು ವಿನಾಯ್ತಿ- ₹5,40,000
ತೆರಿಗೆಗೆ ಒಳಪಡುವ ಆದಾಯ- ₹59,786

ನೀವು ₹ 59,786ಕ್ಕೆ ತೆರಿಗೆ ಸಲ್ಲಿಸಬೇಕು ಹಾಗೂ ರಿಟರ್ನ್ ತುಂಬ ಬೇಕಾಗುತ್ತದೆ. (ತಾ. 1–4–2019 – 31–3–2020ರ ಅವಧಿಗೆ ಆದಾಯ ತೆರಿಗೆ ಮಿತಿ ₹ 3 ಲಕ್ಷದಿಂದ ₹ 5 ಲಕ್ಷಗಳಿಗೆ ಹೆಚ್ಚಿಸಲಾಗಿದೆ.)

***
ಹೆಸರು, ಊರು ಬೇಡ
ನಾನು ನಿವೇಶನ ಮಾರಾಟ ಮಾಡಿ ಬಂದ ಹಣ ₹ 11 ಲಕ್ಷವನ್ನು Capital Gain ಖಾತೆಯಲ್ಲಿ ಬ್ಯಾಂಕಿನಲ್ಲಿ ಇರಿಸಿದ್ದೆ. ಅದು ಪೂರ್ಣಗೊಂಡು ₹ 13,64,000 ಆಗಿದೆ. ಎಸ್.ಬಿ.ಐ.ಗೆ ಹೋಗಿ ಕೇಳಿದರೆ, ಹಣ ಕೊಡಲು ಬರುವುದಿಲ್ಲ. ಈ ಹಣ ಮತ್ತೊಂದು ಮನೆ ಕೊಳ್ಳಲು ಮಾತ್ರ ಕೊಡಬಹುದು ಎನ್ನುತ್ತಾರೆ. ₹ 13.64 ಲಕ್ಷಕ್ಕೆ ಮನೆ ಹೇಗೆ ಕೊಂಡು ಕೊಳ್ಳಲಿ?

ಉತ್ತರ: ಬ್ಯಾಂಕಿನವರು ಹೇಳಿರುವುದು ಸರಿ ಇರುತ್ತದೆ. ನಿವೇಶನ ಮಾರಾಟ ಮಾಡಿದ ತಕ್ಷಣ Capital Gain Tax ತುಂಬ ಬೇಕಾಗಿತ್ತು ಅಥವಾ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಇಲ್ಲವೆ ರೂರಲ್ ಎಲೆಕ್ಟ್ರಿಫಿಕೇಷನ್ ಬಾಂಡ್‌ಗಳಲ್ಲಿ ತೊಡಗಿಸಬೇಕಾಗಿತ್ತು. ನೀವು ತಕ್ಷಣ ಚಾರ್ಟರ್ಡ್ ಅಕೌಂಟೆಂಟ್ ಸಂಪರ್ಕಿಸಿ ವಿಷಯ ತಿಳಿಸಿ, ಬರುವ ತೆರಿಗೆ, ದಂಡ ತುಂಬಿ ಉಳಿದ ಹಣ ವಾಪಸ್‌ ಪಡೆಯಿರಿ.

ಪ್ರತಿಕ್ರಿಯಿಸಿ (+)