ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ತ್ರೈಮಾಸಿಕ ಜಿಡಿಪಿ ಶೇ 4.5

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಆರ್ಥಿಕತಜ್ಞರ ಅಂದಾಜು
Last Updated 26 ಫೆಬ್ರುವರಿ 2020, 20:03 IST
ಅಕ್ಷರ ಗಾತ್ರ

ಮುಂಬೈ : 2019ರ ಅಕ್ಟೋಬರ್‌ – ಡಿಸೆಂಬರ್‌ನ ಮೂರನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ವೃದ್ಧಿ ದರವು ಶೇ 4.5ರಷ್ಟು ಇರಲಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ದ್ವಿತೀಯ ತ್ರೈಮಾಸಿಕದಲ್ಲಿಯೂ ವೃದ್ಧಿ ದರ ಇದೇ ಮಟ್ಟದಲ್ಲಿತ್ತು. ಜಿಡಿಪಿ ಕುರಿತ ಸರ್ಕಾರದ ಅಧಿಕೃತ ಅಂಕಿ ಅಂಶಗಳು ಶುಕ್ರವಾರ ಪ್ರಕಟವಾಗಲಿವೆ.

ಭಾರತವು ಹಲವಾರು ಸರಕುಗಳ ತಯಾರಿಕೆಗೆ ಚೀನಾದ ಆಮದನ್ನು ಹೆಚ್ಚಾಗಿ ನೆಚ್ಚಿಕೊಂಡಿರುವುದರಿಂದ ‘ಕೋವಿಡ್‌–19’ ವೈರಸ್‌ ಹಾವಳಿಯು ದೇಶಿ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹತ್ತಿ, ವಜ್ರದ ರಫ್ತು ಮತ್ತು ವಾಹನ ಬಿಡಿಭಾಗಗಳು, ಸೌರಶಕ್ತಿ ಉತ್ಪಾದನೆ ಯೋಜನೆಗಳಿಗೆ ಅಗತ್ಯವಾದ ಸಲಕರಣೆಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಕಂಡುಬರಲಿದೆ. ಕೊರೊನಾ ವೈರಸ್‌ ಹಕ್ಕಿ ಮೂಲದಿಂದ ಬಂದಿಲ್ಲದಿದ್ದರೂ ಕುಕ್ಕುಟೋದ್ಯಮ ವಹಿವಾಟಿನ ಮೇಲೆ ಕೆಲಮಟ್ಟಿಗೆ ಪರಿಣಾಮ ಬೀರಲಿದೆ.

2019–20ನೇ ಹಣಕಾಸು ವರ್ಷದಲ್ಲಿನ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಎಸ್‌ಬಿಐ ಅರ್ಥಶಾಸ್ತ್ರಜ್ಞರು ಶೇ 4.6 ರಿಂದ ಶೇ 4.7ಕ್ಕೆ ಪರಿಷ್ಕರಿಸಿದ್ದಾರೆ. ಮಂದಗತಿಯ ಆರ್ಥಿಕ ಪ್ರಗತಿಯು 2018ರ ಏಪ್ರಿಲ್‌ನಿಂದಲೇ ಆರಂಭಗೊಂಡಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT