ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ಕ್ವಾಲ್‌ಕಾಂ ₹ 730 ಕೋಟಿ ಹೂಡಿಕೆ

Last Updated 13 ಜುಲೈ 2020, 5:16 IST
ಅಕ್ಷರ ಗಾತ್ರ

ನವದೆಹಲಿ: ಕೋಟ್ಯಧಿಪತಿ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ನ ಡಿಜಿಟಲ್‌ ಘಟಕ ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ವೈರ್‌ಲೆಸ್‌ ತಂತ್ರಜ್ಞಾನದ ಪ್ರಮುಖ ಕಂಪನಿ ಕ್ವಾಲ್‌ಕಾಂ ವೆಂಚರ್ಸ್‌ ₹ 730 ಕೋಟಿ ಬಂಡವಾಳ ತೊಡಗಿಸಿದೆ.

ಜಿಯೊ ಪ್ಲಾಟ್‌ಫಾರ್ಮ್ಸ್‌ನ ಶೇ 0.15ರಷ್ಟು ಪಾಲು ಖರೀದಿಸಲು ಕ್ವಾಲ್‌ಕಾಂ ವೆಂಚರ್ಸ್‌ ಈ ಬಂಡವಾಳ ತೊಡಗಿಸಿದೆ. ಏಪ್ರಿಲ್‌ನಿಂದೀಚೆಗೆ ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ಒಟ್ಟಾರೆ ₹ 1.18 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ.

ದೇಶದಲ್ಲಿ ಜಿಯೊ ಜಾರಿಗೊಳಿಸಲಿರುವ 5ಜಿ ಮೊಬೈಲ್‌ ತಂತ್ರಜ್ಞಾನದ ಮೂಲಸೌಕರ್ಯ ಮತ್ತು ಸೇವೆ ಅಳವಡಿಕೆಗೆ ಈ ಹೂಡಿಕೆ ನೆರವಾಗಲಿದೆ ಎಂದು ಕ್ವಾಲ್‌ಕಾಂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT