ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಿಂಟಲ್ ತೊಗರಿ ₹ 8275!

ಆರು ತಿಂಗಳಿನಿಂದ ಏರುಗತಿಯಲ್ಲಿರುವ ಧಾನ್ಯ
Last Updated 23 ಆಗಸ್ಟ್ 2022, 19:38 IST
ಅಕ್ಷರ ಗಾತ್ರ

ಕಲಬುರಗಿ: ಅತಿವೃಷ್ಟಿ ಮತ್ತು ಬೆಳೆ
ಹಾನಿಯಿಂದ ಜಿಲ್ಲೆಯಲ್ಲಿ ತೊಗರಿ ಆವಕ ಕಡಿಮೆಯಾಗಿದ್ದು, ಅದರ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 8275ಕ್ಕೆ ಏರಿಕೆಯಾಗಿದೆ. ಕಲಬುರಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಮಂಗಳವಾರ 940 ಕ್ವಿಂಟಲ್ ತೊಗರಿ ಮಾರಾಟವಾಗಿದೆ. ಸರಾಸರಿ ದರ
₹ 8000 ಆಸುಪಾಸಿನಲ್ಲಿದೆ.

ಸರ್ಕಾರ ಕಳೆದ ವರ್ಷ ಒಂದು ಕ್ವಿಂಟಲ್ ತೊಗರಿಗೆ ₹ 6300 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದರೆ, ಈ ವರ್ಷ ₹ 6600 ನಿಗದಿಪಡಿಸಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ಕ್ವಿಂಟಲ್‌ಗೆ ₹ 8000ಕ್ಕೂ ಹೆಚ್ಚಿನ ದರಕ್ಕೆ ಮಾರಾಟ ಆಗುತ್ತಿದೆ.

‘ಮಾರುಕಟ್ಟೆಗೆ ತೊಗರಿ ಆವಕ ಕಡಿಮೆಯಾದ ಕಾರಣ ಬೇಡಿಕೆ ಹೆಚ್ಚಿದೆ. 6 ತಿಂಗಳಿನಿಂದ ದರ ₹ 200, ₹ 300ರಂತೆ ಹೆಚ್ಚಾಗುತ್ತಿದೆ’ ಎಂದು ಕಲಬುರಗಿ ಎಪಿಎಂಸಿ ಕಾರ್ಯದರ್ಶಿ ಶೈಲಜಾ ಬಾಗೇವಾಡಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಸಂಸ್ಕರಿಸಿದ ಪಟಕಾ ತೊಗರಿ ಬೇಳೆ ಪ್ರತಿ ಕ್ವಿಂಟಲ್‌ಗೆ ₹ 10,715ಕ್ಕೆ ಮಾರಾಟ ಆಗುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಟು ತೊಗರಿ ಸಿಗುತ್ತಿಲ್ಲ’ ಎಂದು ಗುಲಬರ್ಗಾ ದಾಲ್ ಮಿಲ್ಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಶಿವಶರಣಪ್ಪ ನಿಗ್ಗುಡಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT