ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಎಪಿಎಂಸಿಯಲ್ಲಿ ಈರುಳ್ಳಿಗೆ ದಾಖಲೆ ಬೆಲೆ

Last Updated 2 ಡಿಸೆಂಬರ್ 2019, 18:30 IST
ಅಕ್ಷರ ಗಾತ್ರ

ರಾಯಚೂರು: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ₹10,400 ದರಕ್ಕೆ (ಕನಿಷ್ಠ ದರ ₹ 2 ಸಾವಿರ) ಮಾರಾಟವಾಯಿತು. ಸೋಮವಾರದ ಮಟ್ಟಿಗೆ ಇದು ರಾಜ್ಯದಲ್ಲಿಯೇ ಗರಿಷ್ಠ ದರ.

ಬೆಂಗಳೂರಿನ ಯಶವಂತಪುರ ಎಪಿಎಂಸಿಯಲ್ಲಿ ಸೋಮವಾರ ಪ್ರತಿ ಕ್ವಿಂಟಲ್‌ಗೆ ₹9,500ವರೆಗೆ ಈರುಳ್ಳಿ ಮಾರಾಟವಾಗಿದೆ.

ರಾಯಚೂರು ಎಪಿಎಂಸಿಯಲ್ಲಿ ಉತ್ತಮದರ ದೊರೆಯುತ್ತಿರುವುದರಿಂದ ನೆರೆಯ ಜಿಲ್ಲೆಗಳ ಹಾಗೂ ಆಂಧ್ರ ಪ್ರದೇಶ, ತೆಲಂಗಾಣ ರೈತರು ಈರುಳ್ಳಿ ಮಾರಾಟಕ್ಕೆ ತರುತ್ತಿದ್ದಾರೆ.

‘ಇಲ್ಲಿ ಈರುಳ್ಳಿ ಖರೀದಿಗೆ ಮೂವರೇ ಮಧ್ಯವರ್ತಿಗಳಿದ್ದಾರೆ. ಸೋಮವಾರ 5 ಸಾವಿರ ಕ್ವಿಂಟಲ್‌ ಆವಕವಾಗಿತ್ತು. ಆ ಪೈಕಿ3,500 ಕ್ವಿಂಟಲ್‌ ಮಾರಾಟ ವಾಗಿದೆ’ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT