ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Paytm ಪೇಮೆಂಟ್ ಬ್ಯಾಂಕ್‌: ಕೈಗೊಂಡ ಕ್ರಮದ ಮರುಪರಿಶೀಲನೆ ಅಸಾಧ್ಯ– RBI ಗವರ್ನರ್

Published 12 ಫೆಬ್ರುವರಿ 2024, 11:32 IST
Last Updated 12 ಫೆಬ್ರುವರಿ 2024, 11:32 IST
ಅಕ್ಷರ ಗಾತ್ರ

ನವದೆಹಲಿ: 'ಪೇಟಿಎಂ ಪೇಮೆಂಟ್ ಬ್ಯಾಂಕ್ ವಿರುದ್ಧ ಕೈಗೊಂಡ ಕ್ರಮವನ್ನು ಮರುಪರಿಶೀಲಿಸಲು ಯಾವುದೇ ಅವಕಾಶವಿಲ್ಲ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ ದಾಸ್ ಸೋಮವಾರ ಹೇಳಿದ್ದಾರೆ.

ಜನವರಿ 31ರಂದು ಮಹತ್ವದ ಆದೇಶ ಹೊರಡಿಸಿದ್ದ ಆರ್‌ಬಿಐ, ತನ್ನ ಗ್ರಾಹಕರಿಂದ ವ್ಯಾಲೆಟ್, ಫಾಸ್ಟ್‌ಟ್ಯಾಗ್‌ ಹಾಗೂ ಇನ್ನಿತರ ಪಾವತಿಗಳಿಗೆ ಸ್ವೀಕರಿಸುವ ಟಾಪ್‌ಅಪ್ ಡೆಪಾಸಿಟ್‌ಗಳನ್ನು ಫೆ. 29ರಿಂದ ಸ್ಥಗಿತಗೊಳಿಸುವಂತೆ ಪೇಟಿಎಂಗೆ ಆದೇಶಿಸಿತ್ತು.

ಈ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ದಾಸ್, ‘ಸಮಗ್ರ ಮೌಲ್ಯಮಾಪನದ ನಂತರವೇ ಪೇಟಿಎಂ ಪೇಮೆಂಟ್ ಬ್ಯಾಂಕ್ ವಿರುದ್ಧ ಆರ್‌ಬಿಐ ಅಗತ್ಯ ಕ್ರಮ ಕೈಗೊಂಡಿದೆ. ಹೀಗಾಗಿ ಈ ವಿಷಯದಲ್ಲಿ ಮರುಪರಿಶೀಲನೆಯ ವಿಷಯ ಉದ್ಭವಿಸದು’ ಎಂದಿದ್ದಾರೆ.

‘ಡಿಜಿಟಲ್ ಹಣಕಾಸು ಕ್ಷೇತ್ರವನ್ನು ಸದಾ ಬೆಂಬಲಿಸುವ ಆರ್‌ಬಿಐ, ಹಲವು ಉತ್ತೇಜನಗಳನ್ನೂ ನೀಡುತ್ತಿದೆ. ಅದರ ನಡುವೆಯೂ ಗ್ರಾಹಕರ ಹಿತ ಕಾಯುವುದು ಮತ್ತು ಸುಭದ್ರ ಆರ್ಥಿಕತೆಯನ್ನು ಖಾತ್ರಿಪಡಿಸುವುದೂ ಆರ್‌ಬಿಐನ ಜವಾಬ್ದಾರಿಗಳಾಗಿವೆ’ ಎಂದು ಹೇಳಿದ್ದಾರೆ.

ಪೇಟಿಎಂ ವಿಷಯದಲ್ಲಿ ‘ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು’ ವಿಷಯ ಕುರಿತ ಉತ್ತರ ರೂಪವನ್ನು ಆರ್‌ಬಿಐ ಶೀಘ್ರದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT