ಮಂಗಳವಾರ, ಸೆಪ್ಟೆಂಬರ್ 21, 2021
23 °C

ರೆಪೊ ದರ ಯಥಾಸ್ಥಿತಿ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಕೋವಿಡ್‌ನ ಮೂರನೆಯ ಅಲೆ ಎದುರಾಗುವ ಭೀತಿ ಇರುವುದರಿಂದ ಹಾಗೂ ಚಿಲ್ಲರೆ ಹಣದುಬ್ಬರ ದರವು ಕಡಿಮೆ ಆಗಿಲ್ಲದಿರುವ ಕಾರಣ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ರೆಪೊ ದರದಲ್ಲಿ ಬದಲಾವಣೆ ಮಾಡದಿರುವ ಸಾಧ್ಯತೆ ಇದೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯು ಬುಧವಾರದಿಂದ ಆರಂಭವಾಗಲಿದೆ. ಸಭೆಯ ನಿರ್ಣಯಗಳನ್ನು ಆರ್‌ಬಿಐ ಶುಕ್ರವಾರ ಪ್ರಕಟಿಸಲಿದೆ. ಹಿಂದಿನ ಬಾರಿಯ ಎಂಪಿಸಿ ಸಭೆಯು ಹಣದುಬ್ಬರದ ಕಾರಣದಿಂದಾಗಿ ರೆಪೊ ದರ ಬದಲಿಸದಿರುವ ತೀರ್ಮಾನ ಕೈಗೊಂಡಿತ್ತು.

‘ಸರಕುಗಳ ಬೆಲೆ ಹೆಚ್ಚಾಗಿರುವುದು ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಉಂಟುಮಾಡಲಿದೆ. ಆರ್‌ಬಿಐ ಈ ಸಂದರ್ಭದಲ್ಲಿ ಕಾದುನೋಡುವ ತಂತ್ರದ ಮೊರೆ ಹೋಗುತ್ತದೆ ಎಂಬುದು ನಮ್ಮ ನಿರೀಕ್ಷೆ. ಹಣಕಾಸು ನೀತಿಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ತರಲು ಆರ್‌ಬಿಐಗೆ ಈಗ ಅವಕಾಶ ಇಲ್ಲ’ ಎಂದು ಡೆಲಾಯ್ಟ್‌ ಇಂಡಿಯಾದ ಅರ್ಥಶಾಸ್ತ್ರಜ್ಞೆ ರುಮ್‌ಕಿ ಮಜುಮ್ದಾರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೆಟ್ರೋಲ್, ಡೀಸೆಲ್‌ ಬೆಲೆ ಹೆಚ್ಚಳವಾಗಿರುವ ಕಾರಣದಿಂದಾಗಿ ಹಣದುಬ್ಬರ ಪ್ರಮಾಣ ಜಾಸ್ತಿ ಇದೆ. ಕೆಲವು ಸಮಯದ ನಂತರ ಈ ಹಣದುಬ್ಬರವು ಸಹಜ ಮಟ್ಟಕ್ಕೆ ಬರಲಿದೆ. ಈ ಸಂದರ್ಭದಲ್ಲಿ ಆರ್‌ಬಿಐ ರೆಪೊ ದರ ಹೆಚ್ಚಿಸಲಿಕ್ಕಿಲ್ಲ ಎಂದು ಶ್ರೀರಾಂ ಟ್ರಾನ್ಸ್‌ಪೋರ್ಟ್‌ ಫೈನಾನ್ಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಉಮೇಶ್ ರೇವಣಕರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.