ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ ರೆಪೊ ದರ ಮತ್ತೆ ಕಡಿತ?

ಇಂದಿನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ನಿರ್ಧಾರ
Last Updated 3 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ಮುಂಬೈ: ಆರ್ಥಿಕತೆಗೆ ಚೈತನ್ಯ ತುಂಬಲು ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಮತ್ತೆ ಕಡಿತಗೊಳಿಸುವ ಸಾಧ್ಯತೆ ಇದೆ.

ವಿತ್ತೀಯ ಉತ್ತೇಜನಾ ಕೊಡುಗೆಗಳನ್ನು ನೀಡುವುದರ ಬಗ್ಗೆ ಸದ್ಯಕ್ಕೆ ಕೇಂದ್ರ ಸರ್ಕಾರದ ಕೈ ಕಟ್ಟಿಹಾಕಿದಂತಾಗಿದೆ. ಕೇಂದ್ರೀಯ ಬ್ಯಾಂಕ್‌ ಮೇಲಿನ ಅವಲಂಬನೆ ಹೆಚ್ಚಿರುವುದರಿಂದ ಬಡ್ಡಿ ದರಗಳು ಕಡಿತಗೊಳ್ಳಲಿವೆ ಎಂದು ಪರಿಣತರು ಅಂದಾಜಿಸಿದ್ದಾರೆ.

ಶುಕ್ರವಾರ ಇಲ್ಲಿ ಸಭೆ ಸೇರಲಿರುವ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯಲ್ಲಿ ಈ ನಿರ್ಧಾರ ಹೊರ ಬೀಳುವ ನಿರೀಕ್ಷೆ ಇದೆ. ಹಣದುಬ್ಬರವು ಆರ್‌ಬಿಐ ನಿಗದಿಪಡಿಸಿರುವ ಹಿತಕರ ಮಟ್ಟದಲ್ಲಿ (ಶೇ 4) ಇರುವುದು ಹಾಗೂ ನಿಧಾನಗೊಂಡಿರುವ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಒತ್ತಡವು ಹೆಚ್ಚಿರುವುದರಿಂದ ಕೇಂದ್ರೀಯ ಬ್ಯಾಂಕ್‌ ರೆಪೊ ದರ ಕಡಿತಗೊಳಿಸುವ ನಿರ್ಧಾರಕ್ಕೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.

‘ರೆಪೊ ಬಡ್ಡಿ ದರ ತಗ್ಗಿಸುವುದಕ್ಕೆ ಸದ್ಯಕ್ಕೆ ಇನ್ನಷ್ಟು ಅವಕಾಶ ಇದೆ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್ ದಾಸ್‌ ಅವರೂ ಈಗಾಗಲೇ ಸುಳಿವು ನೀಡಿದ್ದಾರೆ.

6 ಮಂದಿ ಸದಸ್ಯರನ್ನು ಒಳಗೊಂಡಿರುವ ‘ಎಂಪಿಸಿ’ಯ ಸಭೆಯು 2019–20ನೆ ಹಣಕಾಸು ವರ್ಷದ ನಾಲ್ಕನೆ ದ್ವೈಮಾಸಿಕ ಹಣಕಾಸು ನೀತಿಯನ್ನು ಶುಕ್ರವಾರ ಪ್ರಕಟಿಸಲಿದೆ. ಈ ವರ್ಷದಲ್ಲಿ ಇದುವರೆಗೆ ಆರ್‌ಬಿಐ 4 ಬಾರಿ ರೆಪೊ ದರಗಳನ್ನು ತಗ್ಗಿಸಿದೆ.

ಸರ್ಕಾರ ಈಗಾಗಲೇ ಕಾರ್ಪೊರೇಟ್‌ ತೆರಿಗೆಯಲ್ಲಿ ಭಾರಿ ಕಡಿತ ಮಾಡಿದೆ. ವಿದೇಶಿ ಹೂಡಿಕೆದಾರರ ಮೇಲೆ ವಿಧಿಸಿದ್ದ ಸರ್ಚಾರ್ಜ್‌ ರದ್ದು ಸೇರಿದಂತೆ ಹಲವಾರು ಉಪಕ್ರಮಗಳನ್ನು ಪ್ರಕಟಿಸಿದೆ. ಹಣದುಬ್ಬರವು ನಿಯಂತ್ರಣ ಮಟ್ಟದಲ್ಲಿ ಇರುವುದು, ಹಣಕಾಸು ನೀತಿಯನ್ನು ಇನ್ನಷ್ಟು ಸರಳಗೊಳಿಸಲು ಅವಕಾಶ ಒದಗಿಸಿದೆ. ವಿತ್ತೀಯ ಕ್ರಮಗಳನ್ನು ಪ್ರಕಟಿಸುವುದಕ್ಕೆ ಕೆಲ ಮಿತಿಗಳೂ ಇವೆ.

ಬ್ಯಾಂಕ್‌ಗಳು ತಮ್ಮ ವಿವಿಧ ಸಾಲಗಳ ಬಡ್ಡಿ ದರವನ್ನು ಈ ತಿಂಗಳಿನಿಂದ ರೆಪೊ ದರ ಆಧರಿಸಿ ನಿಗದಿಪಡಿಸುವುದನ್ನು ಆರ್‌ಬಿಐ ಈಗಾಗಲೇ ಕಡ್ಡಾಯಗೊಳಿಸಿದೆ. ಇದರಿಂದ ರೆಪೊ ದರ ಕಡಿತದ ನಿರ್ಧಾರದ ಪ್ರಯೋಜನವು ಸಾಲಗಾರರಿಗೆ ತ್ವರಿತವಾಗಿ ವರ್ಗಾವಣೆಗೊಳ್ಳಲಿದೆ.

ಅಂಕಿ ಅಂಶ

* 4 ಬಾರಿ;ಈ ಹಣಕಾಸು ವರ್ಷದಲ್ಲಿ ಇದುವರೆಗೆ ಆರ್‌ಬಿಐ ಪ್ರಕಟಿಸಿರುವ ರೆಪೊ ದರ ಕಡಿತ

* 0.35 %; ಆಗಸ್ಟ್‌ನಲ್ಲಿ ಕಡಿತ ಮಾಡಿದ ರೆಪೊ ದರ

* 1.10 %; ಈ ವರ್ಷದಲ್ಲಿನ ಇದುವರೆಗಿನ ರೆಪೊ ದರ ಕಡಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT