ಮಂಗಳವಾರ, ನವೆಂಬರ್ 24, 2020
26 °C

ಆರ್‌ಬಿಐ ಕ್ರಮಕ್ಕೆ ಎಸ್‌ಆ್ಯಂಡ್‌ಪಿ ಮೆಚ್ಚುಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ನ (ಎಲ್‌ವಿಬಿ) ವಿಚಾರವಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತ್ವರಿತವಾಗಿ ಕೈಗೊಂಡ ತೀರ್ಮಾನಗಳ ಕಾರಣದಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ಎಸ್‌ಆ್ಯಂಡ್‌ಪಿ ರೇಟಿಂಗ್ಸ್‌ ಸಂಸ್ಥೆ ಹೇಳಿದೆ.

ಎಲ್‌ವಿಬಿಯನ್ನು ಸಿಂಗಪುರ ಮೂಲದ ಡಿಬಿಎಸ್‌ ಬ್ಯಾಂಕ್‌ನಲ್ಲಿ ವಿಲೀನ ಮಾಡುವ ಪ್ರಸ್ತಾವವನ್ನು ಆರ್‌ಬಿಐ ಸಿದ್ಧಪಡಿಸಿದೆ. ಈ ಕ್ರಮವು ಭಾರತದ ಬ್ಯಾಂಕಿಂಗ್ ವಲಯಕ್ಕೆ ಒಳ್ಳೆಯ ಸಂದೇಶ ರವಾನಿಸುತ್ತಿದೆ. ಎಲ್‌ವಿಬಿಗೆ ಅಗತ್ಯವಿದ್ದ ನಗದು ಲಭ್ಯತೆಯನ್ನು ತಂದುಕೊಡುತ್ತದೆ ಎಂದು ಎಸ್‌ಆ್ಯಂಡ್‌ಪಿ ಹೇಳಿದೆ.

ಎಲ್‌ವಿಬಿಯ ಮಾರುಕಟ್ಟೆ ಪಾಲು ಶೇಕಡ 0.2ರಷ್ಟು ಮಾತ್ರ. ‘ಎಲ್‌ವಿಬಿಗೆ ನೆರವಾಗಲು ವಿದೇಶಿ ಮೂಲದ ಬ್ಯಾಂಕ್‌ಅನ್ನು ಆಯ್ಕೆ ಮಾಡಿಕೊಂಡ ಆರ್‌ಬಿಐ ತೀರ್ಮಾನವು, ಬ್ಯಾಂಕಿಂಗ್‌ ವಲಯವನ್ನು ವಿದೇಶಿ ಸಂಸ್ಥೆಗಳ ಕೈಯಲ್ಲಿ ಇರಿಸಲು ತಾನು ಸಿದ್ಧ ಎಂಬ ಸಂದೇಶವನ್ನು ರವಾನಿಸುವಂತಿದೆ’ ಎಂದೂ ಎಸ್‌ಆ್ಯಂಡ್‌ಪಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು