ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಅಂಧರ ಕ್ರಿಕೆಟ್ಗೆ ರಚನಾತ್ಮಕ ಬೆಂಬಲವನ್ನು ಶನಿವಾರ ಪ್ರಕಟಿಸಿದೆ.

ಅಂತರರಾಷ್ಟ್ರೀಯ ಟೂರ್ನಿಗಳಿಗೆ, ತವರು ಸರಣಿಗಳಿಗೆ ನೆರವು ಮತ್ತು ಸ್ಥಳ ಪ್ರವೇಶ ಸೇರಿದಂತೆ ರಚನಾತ್ಮಕ ಬೆಂಬಲವನ್ನು ಭಾರತ ಅಂಧರ ಕ್ರಿಕೆಟ್ ಸಂಸ್ಥೆಗೆ (ಸಿಎಬಿಐ) ಬಿಸಿಸಿಐ ಘೋಷಣೆ ಮಾಡಿದೆ.

‘ದಶಕದಲ್ಲಿ ಭಾರತದ ಅಂಧ ಕ್ರಿಕೆಟಿಗರು ಜಾಗತಿಕ ವೇದಿಕೆಯಲ್ಲಿ ಉತ್ತಮ ಸಾಧನೆ ಮೆರೆದಿದ್ದಾರೆ. ಕಳೆದ ವರ್ಷ ಮಹಿಳಾ ತಂಡವು ಚೊಚ್ಚಲ ಕ್ರಿಕೆಟ್ ವಿಶ್ವಕಪ್ ಸಾಧನೆ ಮಾಡಿದೆ. ಪುರುಷರ ತಂಡವು ಹಲವು ಬಾರಿ ವಿಶ್ವಕಪ್ ಚಾಂಪಿಯನ್ ಆಗಿದೆ. ಅಂಧ ಕ್ರಿಕೆಟಿಗರ ಸಾಧನೆ ಮತ್ತು ಅವರು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಿ ಪುರುಷ ಮತ್ತು ಮಹಿಳಾ ತಂಡಗಳೆರಡಕ್ಕೂ ಬೆಂಬಲ ನೀಡಲು ಬಿಸಿಸಿಐ ಬದ್ಧವಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.