ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IIFL, JM ಹಣಕಾಸು ಸಂಸ್ಥೆಗಳ ಲೆಕ್ಕ ಪರಿಶೋಧನೆಗೆ RBI ನಿರ್ಧಾರ

ಐಐಎಫ್‌ಎಲ್‌ ಫೈನಾನ್ಸ್‌ ಲಿಮಿಟೆಡ್‌ ಹಾಗೂ ಜೆಎಂ ಫೈನಾನ್ಶಿಯಲ್ ಪ್ರಾಡೆಕ್ಟ್ಸ್‌ ಲಿಮಿಟೆಡ್‌
Published 24 ಮಾರ್ಚ್ 2024, 15:43 IST
Last Updated 24 ಮಾರ್ಚ್ 2024, 15:43 IST
ಅಕ್ಷರ ಗಾತ್ರ

ನವದೆಹಲಿ: ಸಾಲ ಮಂಜೂರಾತಿ ಸಂಬಂಧ ನಿಯಮಾವಳಿ ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಐಐಎಫ್‌ಎಲ್‌ ಫೈನಾನ್ಸ್‌ ಲಿಮಿಟೆಡ್‌ ಹಾಗೂ ಜೆಎಂ ಫೈನಾನ್ಶಿಯಲ್ ಪ್ರಾಡೆಕ್ಟ್ಸ್‌ ಲಿಮಿಟೆಡ್‌ನ ವಹಿವಾಟಿನ ಬಗ್ಗೆ ಲೆಕ್ಕ ಪರಿಶೋಧನೆ ನಡೆಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಧರಿಸಿದೆ.

ಬ್ಯಾಂಕಿಂಗ್‌ಯೇತರ ಹಣಕಾಸು ಕಂಪನಿಗಳ ವಿರುದ್ಧದ ತನಿಖೆಯ ಭಾಗವಾಗಿ ಈ ಕ್ರಮಕ್ಕೆ ಮುಂದಾಗಿದೆ. ವಿಶೇಷ ಲೆಕ್ಕ ಪರಿಶೋಧನೆಗಾಗಿ ಪ್ರತ್ಯೇಕವಾಗಿ ಇಬ್ಬರು ಲೆಕ್ಕ ಪರಿಶೋಧಕರ ನಿಯೋಜನೆಗೆ ಟೆಂಡರ್‌ ಕರೆದಿದೆ. 

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಪಟ್ಟಿಯಲ್ಲಿರುವ ಲೆಕ್ಕ ಪರಿಶೋಧಕ ಸಂಸ್ಥೆಗಳು ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬಿಡ್‌ ಸಲ್ಲಿಕೆಗೆ ಏಪ್ರಿಲ್‌ 8 ಅಂತಿಮ ದಿನವಾಗಿದೆ. ಆಯ್ಕೆಯಾದ ಸಂಸ್ಥೆಗಳು ಏಪ್ರಿಲ್‌ 12ರಿಂದ ಈ ಎರಡೂ ಕಂಪನಿಗಳ ಲೆಕ್ಕ ಪರಿಶೋಧನೆಯನ್ನು ನಡೆಸಲಿವೆ.

ಐಐಎಫ್‌ಎಲ್‌ ಫೈನಾನ್ಸ್‌ಗೆ ಚಿನ್ನದ ಸಾಲ ನೀಡದಂತೆ ಆರ್‌ಬಿಐ ಸೂಚಿಸಿದೆ.

ಐಪಿಒಗಳಿಗೆ ಹಣಕಾಸು ಹಾಗೂ ಮಾರ್ಪಡಿಸಲಾಗದ ಡಿಬೆಂಚರ್‌ಗಳ ಚಂದಾದಾರಿಕೆಗೆ ಜೆಎಂ ಫೈನಾನ್ಶಿಯಲ್‌ ಮಂಜೂರು ಮಾಡಿರುವ ಸಾಲದಲ್ಲಿ ನ್ಯೂನತೆಗಳಿದ್ದು, ಗ್ರಾಹಕರ ಹಿತಾಸಕ್ತಿಗೆ ವಿರುದ್ಧವಾಗಿವೆ.  ನಿಯಮಾವಳಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಹಾಗಾಗಿ, ಹೊಸದಾಗಿ ಸಾಲ ಮಂಜೂರು ಮಾಡಬಾರದು ಎಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT