‘ಕ್ರೆಡಾಯ್‌’: 6ರಿಂದರಿಯಾಲಿಟಿ ಎಕ್ಸ್‌ಪೊ

7

‘ಕ್ರೆಡಾಯ್‌’: 6ರಿಂದರಿಯಾಲಿಟಿ ಎಕ್ಸ್‌ಪೊ

Published:
Updated:

ಬೆಂಗಳೂರು: ಭಾರ­ತೀಯ ರಿಯಲ್‌ ಎಸ್ಟೇಟ್‌ ನಿರ್ಮಾಣ­ಗಾ­ರರ ಸಂಘಗಳ ಒಕ್ಕೂಟದ (ಕ್ರೆಡಾಯ್‌) ಬೆಂಗಳೂರು ಘಟಕದ ಆಶ್ರಯದಲ್ಲಿ ವಸತಿ ಯೋಜನೆಗಳ ಎರಡು ದಿನಗಳ ಪ್ರದರ್ಶನವು ಇದೇ 6ರಿಂದ ಎರಡು ದಿನಗಳ ಕಾಲ ನಗರದಲ್ಲಿ ನಡೆಯಲಿದೆ.

ಮಾರತಹಳ್ಳಿಯ ರ‍್ಯಾಡಿಸನ್‌ ಬ್ಲ್ಯೂ(ಪಾರ್ಕ್‌ ಪ್ಲಾಜಾ) ದಲ್ಲಿ ಶನಿವಾರ ಮತ್ತು ಭಾನುವಾರ ಈ ಪ್ರದರ್ಶನವನ್ನು ಏರ್ಪಡಿಸಲಾಗಿದೆ. 40 ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ಮತ್ತು 8 ಹಣಕಾಸು ಸಂಸ್ಥೆಗಳು ಪ್ರದರ್ಶನದಲ್ಲಿ ಭಾಗಿಯಾಗಲಿವೆ. ವಸತಿ ನಿರ್ಮಾಣ ಸಂಸ್ಥೆಗಳು, ಖರೀದಿದಾರರು ಮತ್ತು ಬ್ಯಾಂಕ್‌ಗಳ ಪಾಲಿಗೆ ಇದೊಂದು ಅತಿದೊಡ್ಡ ಪ್ರದರ್ಶನವಾಗಿರಲಿದೆ.

‘ಇತರ ನಗರಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲಿ ವಸತಿ ಯೋಜನೆಗಳ ಬೆಲೆಗಳು ಸ್ಥಿರವಾಗಿರುವುದರಿಂದ ಮನೆ, ಅಪಾರ್ಟ್‌ಮೆಂಟ್‌ ಖರೀದಿಗೆ ಇದು ಸೂಕ್ತ ಸಮಯವಾಗಿದೆ’ ಎಂದು ‘ಕ್ರೆಡಾಯ್‌’ ಅಧ್ಯಕ್ಷ ಆಶೀಶ್‌ ಪುರವಂಕರ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !