ನವದೆಹಲಿ: ರಿಲಯನ್ಸ್ ಜಿಯೊ ಕಂಪನಿಯು ಸ್ಥಿರ ದೂರವಾಣಿ ಸೇವೆ ಒದಗಿಸುವ ಕಂಪನಿಗಳ ಸಾಲಿನಲ್ಲಿ ದೇಶದಲ್ಲಿ ಮೊದಲ ಸ್ಥಾನಕ್ಕೆ ಬಂದಿದೆ. ಬಿಎಸ್‌ಎನ್‌ಎಲ್ ಕಂಪನಿಯು ಎರಡನೆಯ ಸ್ಥಾನಕ್ಕೆ ಕುಸಿದಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮಂಗಳವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳಲ್ಲಿ ಈ ವಿವರ ಇದೆ. ಸ್ಥಿರ ದೂರವಾಣಿ ಸೇವೆ ಒದಗಿಸುವಲ್ಲಿ ಖಾಸಗಿ ಕಂಪನಿಯೊಂದು ದೇಶದಲ್ಲಿ ಮೊದಲ ಸ್ಥಾನಕ್ಕೆ ಬಂದಿರುವುದು ಇದೇ ಮೊದಲು.
ಆಗಸ್ಟ್‌ನಲ್ಲಿ ಜಿಯೊ 73.52 ಲಕ್ಷ ಸ್ಥಿರ ದೂರವಾಣಿ ಸಂಪರ್ಕಗಳನ್ನು, ಬಿಎಸ್‌ಎನ್‌ಎಲ್ 71.32 ಲಕ್ಷ ಸಂಪರ್ಕಗಳನ್ನು ಹೊಂದಿದ್ದವು ಎಂದು ಟ್ರಾಯ್ ಹೇಳಿದೆ. ಬಿಎಸ್‌ಎನ್‌ಎಲ್ ಕಂಪನಿಯು 22 ವರ್ಷಗಳಿಂದ ಸ್ಥಿರ ದೂರವಾಣಿ ಸೇವೆ ಒದಗಿಸುತ್ತಿದೆ, ಜಿಯೊ ಮೂರು ವರ್ಷಗಳಿಂದ ಈ ಸೇವೆ ನೀಡುತ್ತಿದೆ.
ಆಗಸ್ಟ್‌ನಲ್ಲಿ ಜಿಯೊ ಹೊಸದಾಗಿ 2.62 ಲಕ್ಷ ಚಂದಾದಾರರನ್ನು ಪಡೆದುಕೊಂಡಿದೆ. ಬಿಎಸ್‌ಎನ್‌ಎಲ್ 15,734 ಚಂದಾದಾರರನ್ನು ಕಳೆದುಕೊಂಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.