ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ ಪವರ್‌ ನಷ್ಟ ₹291 ಕೋಟಿ

Last Updated 28 ಜನವರಿ 2023, 18:34 IST
ಅಕ್ಷರ ಗಾತ್ರ

ನವದೆಹಲಿ: ರಿಲಯನ್ಸ್ ಪವರ್‌ ಕಂಪನಿಯ ನಿವ್ವಳ ನಷ್ಟವು 2022ರ ಡಿಸೆಂಬರ್‌ ತ್ರೈಮಾಸಿಕದಲ್ಲಿ ₹291.54 ಕೋಟಿಗೆ ಏರಿಕೆ ಆಗಿದೆ.

2021ರ ಡಿಸೆಂಬರ್‌ ತ್ರೈಮಾಸಿಕದಲ್ಲಿ ನಿವ್ವಳ ನಷ್ಟ ₹97.22 ಕೋಟಿಯಷ್ಟು ಇತ್ತು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಕಂಪನಿಯ ಒಟ್ಟು ವೆಚ್ಚವು ₹1,900 ಕೋಟಿಯಿಂದ ₹2,126 ಕೋಟಿಗೆ ಏರಿಕೆ ಆಗಿದೆ. ಒಟ್ಟು ವರಮಾನ ₹1,858 ಕೋಟಿಯಿಂದ ₹1,936 ಕೋಟಿಗೆ ಏರಿಕೆ ಆಗಿದೆ ಎಂದು ತಿಳಿಸಿದೆ.

ತ್ರೈಮಾಸಿಕದಲ್ಲಿ ಕಂಪನಿಯು ₹178 ಕೋಟಿ ಸಾಲವನ್ನು ಮರುಪಾವತಿ ಮಾಡಿದೆ.

ಶನಿವಾರ ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಅಶೋಕ್‌ ಕುಮಾರ್‌ ಪಾಲ್‌ ಅವರನ್ನು ಜನವರಿ 29ರಿಂದ ಜಾರಿಗೆ ಬರುವಂತೆ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಆಗಿ ನೇಮಕ ಮಾಡಲಾಗಿದೆ.

ಡಿಸಿಬಿ ಬ್ಯಾಂಕ್‌ ಲಾಭ ಹೆಚ್ಚಳ

ನವದೆಹಲಿ (ಪಿಟಿಐ): ಖಾಸಗಿ ವಲಯದ ಡಿಸಿಬಿ ಬ್ಯಾಂಕ್‌ನ ಲಾಭವು 2022ರ ಡಿಸೆಂಬರ್‌ ತ್ರೈಮಾಸಿಕದಲ್ಲಿ ₹114 ಕೋಟಿ ಆಗಿದೆ. 2021ರ ಇದೇ ಅವಧಿಯಲ್ಲಿ ಲಾಭವು ₹75 ಕೋಟಿ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭದಲ್ಲಿ ಶೇ 52ರಷ್ಟು ಹೆಚ್ಚಳ ಕಂಡುಬಂದಿದೆ.

ಒಟ್ಟು ವರಮಾನ ₹463 ಕೋಟಿಯಿಂದ ₹541 ಕೋಟಿಗೆ ಏರಿಕೆ ಆಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ. ವಸೂಲಾಗದ ಸಾಲದ ಸರಾಸರಿ (ಎನ್‌ಪಿಎ) ಪ್ರಮಾಣ ಶೇ 4.78ರಿಂದ ಶೇ 3.62ಕ್ಕೆ ಇಳಿಕೆ ಆಗಿದೆ. ನಿವ್ವಳ ಎನ್‌ಪಿಎ ಶೇ 2.55 ರಿಂದ ಶೇ 1.37ಕ್ಕೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT