ಗುರುವಾರ , ಜೂಲೈ 9, 2020
23 °C

ಆರ್‌ಐಎಲ್‌ ನಿವ್ವಳ ಲಾಭ ₹ 11,640 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡಿಸೆಂಬರ್ ತಿಂಗಳಿಗೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ (ಆರ್‌ಐಎಲ್‌) ನಿವ್ವಳ ಲಾಭದಲ್ಲಿ ಶೇ 13.5 ರಷ್ಟು ಏರಿಕೆಯಾಗಿ ₹ 11,640 ಕೋಟಿಗೆ ತಲುಪಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹ 10,251 ಕೋಟಿ ನಿವ್ವಳ ಲಾಭ ದಾಖಲಿಸಿತ್ತು. ಹಿಂದಿನ ವರ್ಷ ಈ ಅವಧಿಯಲ್ಲಿನ ವರಮಾನವು ₹ 1.71 ಲಕ್ಷ ಕೋಟಿಗಳಷ್ಟಿದ್ದರೆ, ಈ ಬಾರಿ ₹ 1.68 ಲಕ್ಷ ಕೋಟಿಗೆ ಇಳಿದು ಶೇ 1.4ರಷ್ಟು ಕುಸಿತ ಕಂಡಿದೆ.

ಜಿಯೊ ಸಾಧನೆ: ‘ಆರ್‌ಐಎಲ್‌’ನ ಅಂಗಸಂಸ್ಥೆ ರಿಲಯನ್ಸ್ ಜಿಯೊ ಇನ್ಫೊಕಾಂನ ಲಾಭ ಗಳಿಕೆ ಗಮನಾರ್ಹವಾಗಿ ಹೆಚ್ಚಿದೆ. ತ್ರೈಮಾಸಿಕದಲ್ಲಿನ ನಿವ್ವಳ ಲಾಭವು  ಶೇ 62.5ರಷ್ಟು ಏರಿಕೆಯಾಗಿ ₹ 1,350 ಕೋಟಿಗೆ ತಲುಪಿದೆ.

ವರಮಾನವು  ಶೇ 28ರಷ್ಟು ಹೆಚ್ಚಳವಾಗಿ ₹ 13,968 ಕೋಟಿಗೆ ತಲುಪಿದೆ.

 

 

 

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು