ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಯೊ ಪ್ಲ್ಯಾಟ್‌ಫಾರ್ಮ್ಸ್‌ನಲ್ಲಿ ವಿಸ್ತಾ ಈಕ್ವಿಟಿ ₹ 11,367 ಕೋಟಿ

ಎರಡು ವಾರಗಳಲ್ಲಿ ಮೂರನೇ ಹೂಡಿಕೆ
Last Updated 8 ಮೇ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ನ (ಆರ್‌ಐಎಲ್‌) ಡಿಜಿಟಲ್‌ ಘಟಕವಾದ ಜಿಯೊ ಪ್ಲ್ಯಾಟ್‌ಫಾರ್ಮ್ಸ್‌ನಲ್ಲಿ ಅಮೆರಿಕದ ವಿಸ್ತಾ ಈಕ್ವಿಟಿ ಪಾರ್ಟನರ್ಸ್‌ ₹ 11,367 ಕೋಟಿ ಬಂಡವಾಳ ಹೂಡಿಕೆ ಮಾಡಿದೆ.

ಎರಡು ವಾರಗಳ ಅವಧಿಯಲ್ಲಿ ಮೂರನೇ ಹೂಡಿಕೆ ಇದಾಗಿದೆ. ತೈಲದಿಂದ ದೂರಸಂಪರ್ಕವರೆಗೆ ವಹಿವಾಟು ನಡೆಸುವ ‘ಆರ್‌ಐಎಲ್‌’, 2021ರ ವೇಳೆಗೆ ಸಾಲದಿಂದ ಮುಕ್ತಗೊಳ್ಳಲು ಪಾಲು ಬಂಡವಾಳವನ್ನು ಮಾರಾಟ ಮಾಡುತ್ತಿದೆ. ಸದ್ಯದ ಬೆಳವಣಿಗೆ ಗಮನಿಸಿದರೆ ಈ ವರ್ಷದ ಡಿಸೆಂಬರ್‌ ವೇಳೆಗೆ ಕಂಪನಿಯ ಉದ್ದೇಶ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇದುವರೆಗಿನ ಮೂರು ಪಾಲು ಮಾರಾಟದಿಂದ ಕಂಪನಿಗೆ ₹ 60,596.37 ಕೋಟಿ ಮೊತ್ತದ ಬಂಡವಾಳ ಹರಿದು ಬಂದಿದೆ.

ವಿಸ್ತಾ ಈಕ್ವಿಟಿ ಪಾರ್ಟನರ್ಸ್‌, ಜಿಯೊ ಪ್ಲ್ಯಾಟ್‌ಫಾರ್ಮ್ಸ್‌ನ ಶೇ 2.32 ಪಾಲು ಬಂಡವಾಳ ಖರೀದಿಸಲಿದೆ. ಈ ಮೂಲಕ ರಿಲಯನ್ಸ್‌ ಇಂಡಸ್ಟ್ರೀಸ್‌, ಫೇಸ್‌ಬುಕ್‌ ನಂತರದ ಮೂರನೇ ಅತಿದೊಡ್ಡ ಹೂಡಿಕೆ ಸಂಸ್ಥೆಯಾಗಿರಲಿದೆ.

ವಿಸ್ತಾ ಈಕ್ವಿಟಿ ಪಾರ್ಟನರ್‌ನ ಸಹ ಸ್ಥಾಪಕ ಬ್ರಿಯಾನ್‌ ಸೇಠ್‌ ಅವರ ತಂದೆ ಗುಜರಾತ್‌ನವರಾಗಿದ್ದಾರೆ. ಮುಕೇಶ್‌ ಅಂಬಾನಿ ಅವರೂ ಗುಜರಾತ್‌ನವರಾಗಿದ್ದಾರೆ. ವಿಸ್ತಾದ ಸ್ಥಾಪಕ ರಾಬರ್ಟ್‌ ಸ್ಮಿಥ್‌ ಜತೆಗಿನ ಮುಕೇಶ್‌ ಅವರ ವೈಯಕ್ತಿಕ ಸಂಪರ್ಕದ ಫಲವಾಗಿ ಈ ಹೂಡಿಕೆ ಒಪ್ಪಂದ ಏರ್ಪಟ್ಟಿದೆ.

ಜಿಯೊ ಪ್ಲ್ಯಾಟ್‌ಫಾರ್ಮ್ಸ್‌ನ ಶೇ 20ರಷ್ಟು ಪಾಲು ಬಂಡವಾಳ ಮಾರಾಟ ಮಾಡಲು ‘ಆರ್‌ಐಎಲ್‌’ ನಿರ್ಧರಿಸಿದೆ. ಇನ್ನಷ್ಟು ಕಂಪನಿಗಳು ಉಳಿದ ಪಾಲು ಬಂಡವಾಳ ಖರೀದಿಸಲಿವೆ.

20 %: ಜಿಯೊ ಪ್ಲ್ಯಾಟ್‌ಫಾರ್ಮ್ಸ್‌ನ ಪಾಲು ಮಾರಾಟಕ್ಕೆ
13.46 %: ಮೂರು ಒಪ್ಪಂದದಿಂದ ಮಾರಾಟಗೊಂಡ ಪಾಲು
₹ 60,596.37 ಕೋಟಿ: ಜಿಯೊ ಪ್ಲ್ಯಾಟ್‌ಫಾರ್ಮ್ಸ್‌ ಸಂಗ್ರಹಿಸಿದ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT