ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೆನ್ಸ್‌ಹಾಕ್‌ ಕಂಪನಿ ಖರೀದಿಸಲಿರುವ ರಿಲಯನ್ಸ್

Last Updated 6 ಸೆಪ್ಟೆಂಬರ್ 2022, 15:39 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸೌರವಿದ್ಯುತ್ ಸಾಫ್ಟ್‌ವೇರ್‌ ಕಂಪನಿ ‘ಸೆನ್ಸ್‌ಹಾಕ್‌’ನ ಬಹುಪಾಲು ಷೇರುಗಳನ್ನು ₹ 256 ಕೋಟಿಗೆ ಖರೀದಿಸುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಂಗಳವಾರ ಹೇಳಿದೆ.

ರಿಲಯನ್ಸ್ ಕಂಪನಿಯು ಸೆನ್ಸ್‌ಹಾಕ್‌ನ ಶೇಕಡ 79.4ರಷ್ಟು ಷೇರುಗಳನ್ನು ಖರೀದಿ ಮಾಡಲಿದೆ. ನವೀಕರಿಸಬಹುದಾದ ಇಂಧನಗಳ ವಹಿವಾಟಿನಲ್ಲಿ ಹೆಚ್ಚು ಹಣ ತೊಡಗಿಸುವ ಭಾಗವಾಗಿ ರಿಲಯನ್ಸ್ ಈ ಖರೀದಿಗೆ ಮುಂದಾಗಿದೆ. ಸೆನ್ಸ್‌ಹಾಕ್ ಕಂಪನಿಯು, ಸೌರವಿದ್ಯುತ್ ಉದ್ದಿಮೆಗೆ ಅಗತ್ಯವಿರುವ ಸಾಫ್ಟ್‌ವೇರ್ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT