ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಟೊಮೆಟೊ ಕೆ.ಜಿಗೆ ₹80ರಿಂದ ₹85

Last Updated 12 ಸೆಪ್ಟೆಂಬರ್ 2020, 11:53 IST
ಅಕ್ಷರ ಗಾತ್ರ

ನವದೆಹಲಿ: ಪೂರೈಕೆಯಲ್ಲಿ ಕೊರತೆ ಎದುರಾಗಿರುವುದರಿಂದ ದೆಹಲಿಯಲ್ಲಿ ಟೊಮೆಟೊ ಚಿಲ್ಲರೆ ಮಾರಾಟ ದರ ಶನಿವಾರ ಕೆ.ಜಿಗೆ ಗರಿಷ್ಠ ₹85ಕ್ಕೆ ಏರಿಕೆಯಾಗಿದೆ ಎಂದು ವರ್ತಕರು ಹೇಳಿದ್ದಾರೆ.

ಅಸಂಘಟಿತ ಮಾರುಕಟ್ಟೆಯಲ್ಲಿ ಗುಣಮಟ್ಟದ ಆಧಾರದ ಮೇಲೆ ₹ 80–85ರ ದರದಲ್ಲಿ ಮಾರಾಟವಾಗುತ್ತಿದೆ. ಆದರೆ, ಸರ್ಕಾರದ ಮಾಹಿತಿಯ ಪ್ರಕಾರ ಕೆ.ಜಿಗೆ ₹ 60ರಷ್ಟಿದೆ.

ಜೂನ್‌ನಲ್ಲಿ ಟೊಮೆಟೊ ದರ ಕೆ.ಜಿಗೆ ₹ 50–60ರ ಆಸುಪಾಸಿನಲ್ಲಿ ಇತ್ತು. ಆದರೆ, ಟೊಮೆಟೊ ಬೆಳೆಯುವ ಪ್ರಮುಖ ರಾಜ್ಯಗಳಿಂದ ಕಡಿಮೆ ಪ್ರಮಾಣದಲ್ಲಿ ಪೂರೈಕೆ ಆಗಿರುವುದರಿಂದ ಈ ವಾರ ದರದಲ್ಲಿ ದಿಢೀರ್‌ ಏರಿಕೆ ಕಂಡಿದೆ ಎಂದು ತಿಳಿಸಿದ್ದಾರೆ.

ಮದರ್‌ ಡೇರಿಯ ಸಫಲ್‌ ಮಳಿಗೆಯಲ್ಲಿ ಟೊಮೆಟೊ ದರ ಕೆ.ಜಿಗೆ 4 78ರಂತೆ ಮಾರಾಟವಾಗುತ್ತಿದೆ. ಆನ್‌ಲೈನ್‌ ಮಾರಾಟ ಕಂಪನಿ ಗ್ರೋಫರ್ಸ್‌ನಲ್ಲಿ ಕೆ.ಜಿಗೆ ₹ 74–75ರಷ್ಟಿದ್ದರೆ ಬಿಗ್‌ ಬಾಸ್ಕೆಟ್‌ನಲ್ಲಿ ₹ 60ರಷ್ಟಿದೆ.

ಹಣ್ಣು ಮತ್ತು ತರಕಾರಿಗಳ ಸಗಟು ಮಾರಾಟಕ್ಕೆ ಏಷ್ಯಾದಲ್ಲಿಯೇ ಅತಿದೊಡ್ಡ ಮಾರುಕಟ್ಟೆ ಆಗಿರುವ ಆಜಾದ್‌ಪುರ ಮಂಡಿಯಲ್ಲಿ ಕೆ.ಜಿಗೆ ₹ 40 ರಿಂದ ₹ 60ರಂತೆ ಮಾರಾಟವಾಗುತ್ತಿದೆ.

ಕೋವಿಡ್‌ ಬಿಕ್ಕಟ್ಟಿನಿಂದಾಗಿ ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದಲ್ಲಿ ರೈತರು ಈ ಬಾರಿ ಕಡಿಮೆ ಪ್ರದೇಶದಲ್ಲಿ ಟೊಮೆಟೊ ಬೆಳೆದಿದ್ದಾರೆ. ಇದರಿಂದಾಗಿ ಬೆಲೆ ಹೆಚ್ಚಾಗುತ್ತಿದೆ ಎಂದು ಆಜಾದ್‌ಪುರ ಮಂಡಿಯ ಟೊಮೆಟೊ ಬೆಳೆಗಾರರ ಒಕ್ಕೂಟದ ಅಶೋಕ್‌ ಕೌಶಿಕ್‌ ತಿಳಿಸಿದ್ದಾರೆ.

ವಾರ್ಷಿಕವಾಗಿ 1.97 ಕೋಟಿ ಟನ್‌ ಟೊಮೆಟೊ ಬೆಳೆಯಲಾಗುತ್ತಿದ್ದು, 1.15 ಕೋಟಿ ಟನ್‌ ಬಳಕೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT