ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹11.5 ಲಕ್ಷ ಕೋಟಿ ದಾಟಿದ ಆರ್‌ಐಎಲ್‌ ಮೌಲ್ಯ

Last Updated 6 ಜುಲೈ 2020, 11:07 IST
ಅಕ್ಷರ ಗಾತ್ರ

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ‌ (ಆರ್‌ಐಎಲ್‌) ಮಾರುಕಟ್ಟೆ ಮೌಲ್ಯವು ಸೋಮವಾರ ₹ 26,150 ಕೋಟಿ ಹೆಚ್ಚಾಗಿದ್ದು ಒಟ್ಟಾರೆ ಮಾರುಕಟ್ಟೆ ಮೌಲ್ಯವು ₹ 11.59 ಲಕ್ಷ ಕೋಟಿಗೆ ಏರಿಕೆಯಾಗಿದೆ.

ದೇಶದ ಅತ್ಯಂತ ಮೌಲ್ಯಯುತ ಕಂಪನಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ಇರುವ ಆರ್‌ಐಎಲ್‌, ₹ 11 ಲಕ್ಷ ಕೋಟಿ ಮೊತ್ತದ ಮಾರುಕಟ್ಟೆ ಮೌಲ್ಯ ದಾಟಿದ ಮೊದಲ ಕಂಪನಿಯಾಗಿಜೂನ್‌ನಲ್ಲಿ ಹೊರಹೊಮ್ಮಿತ್ತು.

ಕಂಪನಿಯ ಷೇರು ಮೌಲ್ಯ ಬಿಎಸ್‌ಇನಲ್ಲಿ ಶೇ 2.55ರಷ್ಟು ಹೆಚ್ಚಾಗಿ ಪ್ರತಿ ಷೇರಿನ ಬೆಲೆ ದಾಖಲೆಯ ₹ 1,833.10ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಕಂಪನಿಯ ಮಾರುಕಟ್ಟೆ ಮೌಲ್ಯವು ಗರಿಷ್ಠ ಮಟ್ಟಕ್ಕೆ ತಲುಪಿದೆ.

ಎನ್‌ಎಸ್‌ಇನಲ್ಲಿಯೂ ಷೇರಿನ ಬೆಲೆ ಶೇ 2.55ರಷ್ಟು ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹1,833.50ಕ್ಕೆ ತಲುಪಿದೆ.

ಇಂಟೆಲ್‌ ಕ್ಯಾಪಿಟಲ್ ಕಂಪನಿಯುಜಿಯೊ ಪ್ಲಾಟ್‌ಫಾರ್ಮ್ಸ್‌ನ ಶೇ 0.39ರಷ್ಟು ಷೇರುಗಳನ್ನು ಖರೀದಿಸಲು ಮುಂದಾಗಿದ್ದರಿಂದ ಶುಕ್ರವಾರ ಆರ್‌ಐಎಲ್‌ ಷೇರು ಬೆಲೆ ಶೇ 2ರಷ್ಟು ಹೆಚ್ಚಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT