ಹುಂಡೈನಿಂದ ರಸ್ತೆ ಸುರಕ್ಷತಾ ಸಪ್ತಾಹ

7

ಹುಂಡೈನಿಂದ ರಸ್ತೆ ಸುರಕ್ಷತಾ ಸಪ್ತಾಹ

Published:
Updated:

ಬೆಂಗಳೂರು: ದೇಶದ ಎರಡನೆ ಅತಿದೊಡ್ಡ ಕಾರ್‌ ತಯಾರಿಕಾ ಸಂಸ್ಥೆಯಾಗಿರುವ ಹುಂಡೈ ಮೋಟರ್‌ ಇಂಡಿಯಾ, ರಸ್ತೆ ಸುರಕ್ಷತೆ ಬಗ್ಗೆ ದೇಶದಾದ್ಯಂತ ಪ್ರಚಾರ ಅಭಿಯಾನ ಹಮ್ಮಿಕೊಂಡಿದೆ.

ಇದೇ 10ರವರೆಗೆ ನಡೆಯಲಿರುವ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಸಂಸ್ಥೆಯ ‘ಸುರಕ್ಷಿತ ಚಾಲನೆ’ ಅಭಿಯಾನವು, ಸಂಚಾರ ನಿಯಮಗಳ ಪಾಲನೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದೆ. ವಾಹನ ಸವಾರರಲ್ಲಿ ತಮ್ಮ ಸುರಕ್ಷತೆ ಜತೆಗೆ ರಸ್ತೆಗಳನ್ನು ಬಳಸುವ ಇತರರ ಸುರಕ್ಷತೆ ಬಗ್ಗೆಯೂ ಕಾಳಜಿ ಮೂಡಿಸುವ ಕಾರ್ಯಕ್ರಮ ಇದಾಗಿದೆ.

‘ಅತಿವೇಗದಿಂದ ವಾಹನ ಚಲಾಯಿಸಬೇಡಿ, ಸಂಚಾರ ನಿಯಮ ಉಲ್ಲಂಘಿಸಬೇಡಿ, ವಾಹನ ಚಲಾಯಿಸುವಾಗ ಮೊಬೈಲ್‌ ಬಳಸಬೇಡಿ, ಕಡ್ಡಾಯವಾಗಿ ಸೀಟ್‌ ಬೆಲ್ಟ್‌ ಬಳಸಿ, ಕುಡಿದು ವಾಹನ ಚಲಾಯಿಸಬೇಡಿ, ಚಿಕ್ಕ ವಯಸ್ಸಿನವರು ವಾಹನ ಚಲಾಯಿಸದಂತೆ ಎಚ್ಚರವಹಿಸಿ ಮತ್ತು ಪಾದಚಾರಿಗಳ ಸುರಕ್ಷತೆ ಬಗ್ಗೆ ಗಮನ ಹರಿಸಿ– ಈ ಏಳು ನಿಯಮಗಳನ್ನು ಪಾಲಿಸಿದರೆ ಅಪಘಾತಗಳಿಗೆ ಕಡಿವಾಣ ಹಾಕಬಹುದು’ ಎಂದು ಸಂಸ್ಥೆಯ ಮಾರಾಟ ವಿಭಾಗದ ಮುಖ್ಯಸ್ಥ ಪುನೀತ್‌ ಆನಂದ್‌ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !