ಮುಂಬೈ: ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 18 ಪೈಸೆ ಏರಿಕೆಯಾಗಿ 85.56ಕ್ಕೆ ತಲುಪಿತ್ತು. ನಿರಂತರ ವಿದೇಶಿ ನಿಧಿಯ ಒಳಹರಿವು ಮತ್ತು ಸ್ಥಳೀಯ ಮಾರುಕಟ್ಟೆ ಬಲ ಬೆಂಬಲ ನೀಡಿದೆ ಎಂದು ವರದಿ ತಿಳಿಸಿದೆ.

ಕಳೆದ ನಾಲ್ಕು ದಿನಗಳಲ್ಲಿ, ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳಿಗೆ 2 ಬಿಲಿಯನ್ ಡಾಲರ್ಗಳಿಗಿಂತ ಹೆಚ್ಚು ಹೂಡಿಕೆ ಮಾಡಿದ್ದಾರೆ. ಭಾರತೀಯ ಬಾಂಡ್ಗಳಿಗೆ ತಿಂಗಳಿನಿಂದ ಇಲ್ಲಿಯವರೆಗೆ ಒಳಹರಿವು 3 ಬಿಲಿಯನ್ ಡಾಲರ್ಗಳನ್ನು ಮೀರಿದೆ ಎಂದು ಫಾರೆಕ್ಸ್ ಡೀಲರ್ಗಳು ತಿಳಿಸಿದ್ದಾರೆ.

ಆದರೂ, ಹೆಚ್ಚುಯುತ್ತಿರುವ ಜಾಗತಿಕ ವ್ಯಾಪಾರ ಕಳವಳಗಳ ಸಂಭಾವ್ಯ ಆರ್ಥಿಕ ಪರಿಣಾಮದಿಂದಾಗಿ ಹೂಡಿಕೆದಾರರು ಹಿಂದೇಟು ಹಾಕಿರುವುದು ಸ್ಥಳೀಯ ಕರೆನ್ಸಿ ಮೌಲ್ಯದ ಏರಿಕೆಗೆ ಕಡಿವಾಣ ಹಾಕಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ ಮೌಲ್ಯವು ಗ್ರೀನ್ಬ್ಯಾಕ್ ವಿರುದ್ಧ 85.64ಕ್ಕೆ ಪ್ರಾರಂಭವಾಯಿತು. ನಂತರ 85.56 ಕ್ಕೆ ತಲುಪಿತು. ಇದು ಹಿಂದಿನ ವಹಿವಾಟು ಮುಕ್ತಾಯಕ್ಕಿಂತ 18 ಪೈಸೆ ಹೆಚ್ಚಾಗಿದೆ.

ಗುರುವಾರ, ಡಾಲರ್ ಎದುರು ರೂಪಾಯಿ ಮೌಲ್ಯವು 5 ಪೈಸೆ ಕುಸಿದು 85.74ಕ್ಕೆ ವಹಿವಾಟು ಅಂತ್ಯಗೊಳಿಸಿತ್ತು.

.ದೇಶೀಯ ಷೇರು ಮಾರುಕಟ್ಟೆಯಲ್ಲಿ, 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 165.16 ಅಂಶಗಳಷ್ಟು ಕುಸಿತ ಕಂಡು 77,441ರಲ್ಲಿ ವಹಿವಾಟು ಆರಂಭಿಸಿದರೆ, ನಿಫ್ಟಿ 41.55 ಕುಸಿತ ಕಂಡು 23,550 ಅಂಶಗಳಲ್ಲಿ ವಹಿವಾಟು ಾರಂಭಿಸಿತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಗುರುವಾರ ₹11,111 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರದ ದತ್ತಾಂಶಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.