72ರ ಗಡಿ ದಾಟಿದ ರೂಪಾಯಿ

7

72ರ ಗಡಿ ದಾಟಿದ ರೂಪಾಯಿ

Published:
Updated:

ಮುಂಬೈ: ಡಾಲರ್‌ ಎದುರಿನ ರೂಪಾಯಿ ವಿನಿಮಯ ದರದ ಕುಸಿತವು ಸತತ 7ನೇ ದಿನವೂ ಮುಂದುವರೆದಿದ್ದು, ಗುರುವಾರದ ವಹಿವಾಟಿನಲ್ಲಿ ಇದೇ ಮೊದಲ ಬಾರಿಗೆ 72ರ ಗಡಿ ದಾಟಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ದಿನದ ಆರಂಭದಲ್ಲಿ 71.67ರಷ್ಟು ಚೇತರಿಕೆ ಕಂಡಿತ್ತು. ಈ ಆರಂಭಿಕ ಗಳಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಮಧ್ಯಾಹ್ನದ ವೇಳೆಗೆ 72ರ ಗಡಿ ದಾಟಿತ್ತು. ಒಂದು ಹಂತದಲ್ಲಿ 72.11ಕ್ಕೆ ಕುಸಿದಿತ್ತು.

ಪೆಟ್ರೋಲ್‌ ತುಟ್ಟಿ: ಒಂದೆಡೆ ರೂಪಾಯಿ ಅಪಮೌಲ್ಯಗೊಳ್ಳುತ್ತಿದ್ದರೆ, ಇನ್ನೊಂದೆಡೆ ಇಂಧನ ಬೆಲೆ ದುಬಾರಿಯಾಗುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ನ ಪ್ರತಿ ಲೀಟರ್‌ ಬೆಲೆ ₹ 82.16 ಮತ್ತು ಡೀಸೆಲ್‌ ಬೆಲೆ ₹ 73.90ಕ್ಕೆ ತಲುಪಿದೆ.

ಅಪಮೌಲ್ಯದ ಕಾರಣ: ಅಮೆರಿಕದ ಕರೆನ್ಸಿಗೆ ಆಮದುದಾರರಿಂದ ಭಾರಿ ಬೇಡಿಕೆ ಕಂಡು ಬರುತ್ತಿದೆ. ವಿತ್ತೀಯ ಕೊರತೆ ಹೆಚ್ಚಳ ಹಾಗೂ ವಿದೇಶಿ ಬಂಡವಾಳದ ನಿರಂತರ ಹೊರ ಹರಿವಿನಿಂದ ರೂಪಾಯಿ ದರ ದಾಖಲೆ ಪ್ರಮಾಣದಲ್ಲಿ ಅಪಮೌಲ್ಯಗೊಳ್ಳುತ್ತಿದೆ ಎಂದು ವಿದೇಶ ವಿನಿಮಯ ವಹಿವಾಟುದಾರರು ಅಭಿಪ್ರಾಯಪಟ್ಟಿದ್ದಾರೆ. ವಿದೇಶಿ ಬಂಡವಾಳದ ನಿರಂತರ ಹೊರಹರಿವು ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಚಾಲ್ತಿ ಖಾತೆ ಕೊರತೆ ಹೆಚ್ಚಳವೂ ಹೂಡಿಕೆದಾರರಲ್ಲಿ ಕಳವಳ ಮೂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !