ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಗಪ್ಪಾ ಉಳಿತಾಯ?

ದಾರಿ ಯಾವುದಯ್ಯಾ ಉಳಿತಾಯಕ್ಕೆ?
Last Updated 23 ಜುಲೈ 2019, 19:30 IST
ಅಕ್ಷರ ಗಾತ್ರ

‘ಖರ್ಚು ಮಾಡಿ, ಉಳಿತಾಯವಲ್ಲ. ಉಳಿತಾಯ ಮಾಡಿ ಖರ್ಚು ಮಾಡಿ’– ವಾರೆನ್ ಬಫೆಟ್

‘ಒಂದು ರೂಪಾಯಿಯ ಉಳಿತಾಯವು ಎರಡು ರೂಪಾಯಿ ಆದಾಯಕ್ಕಿಂತ ಹೆಚ್ಚು– ಅನಾಮಿಕ

‘ಹೇಗಪ್ಪಾ ಉಳಿತಾಯ ಮಾಡುವುದು. ಬಂದ ಹಣವೇ ನಮಗೇ ಸಾಕಾಗುವುದಿಲ್ಲ. ಸಂಸಾರ ನಿರ್ವಹಣೆಯ ಜವಾಬ್ದಾರಿ, ಕೊಟ್ಟಿರುವ ಮಾತು ನೆರವೇರಿಸುವುದು– ಇವೆಲ್ಲವುಗಳ ನಡುವೆ ಉಳಿತಾಯ ಹೇಗೆ ಸಾಧ್ಯ. ಇದು ಬಹುತೇಕ ಜನರ ಪ್ರಶ್ನೆ.

ವಾಸ್ತವವಾಗಿ ಇತ್ತೀಚಿನ ದಿನಗಳಲ್ಲಿ ಉಳಿತಾಯಕ್ಕೂ ಹಲವಾರು ಹೊಸ ದಾರಿಗಳು ತೆರೆದಿವೆ ಎಂದು ನಿಮಗೆ ಅನಿಸಿದೆಯಾ. ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕೆಲವೊಂದು ವಸ್ತುಗಳ ಮೂಲಕ, ಪದ್ಧತಿಯ ಮೂಲಕ, ಯಂತ್ರಗಳ ಮೂಲಕ, ವೈಯಕ್ತಿಕ ಶಿಸ್ತಿನ ಮೂಲಕ, ಹಣ ನಿರ್ವಹಣೆಯ ವಿಜ್ಞಾನ ಪಾಲಿಸುವುದರಿಂದ ಉಳಿತಾಯ ಮಾಡಬಹುದು ಎಂದು ಈ ದಾರಿಗಳನ್ನು ವಿಂಗಡಿಸಬಹುದು.

ಕೇವಲ ಮೊಬೈಲ್ ಅಲ್ಲ: ಸ್ಮಾರ್ಟ್‌ಫೋನ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವುಗಳಲ್ಲಿರುವ ಸಾಧ್ಯತೆಗಳಿಂದಲೇ ನೀವೆಷ್ಟು ಉಳಿಸಬಹುದೆಂದು ಲೆಕ್ಕಹಾಕಬಹುದು. ಮೊಬೈಲ್‌ನ್ನು ತಾವು ಗಡಿಯಾರ, ಟೇಪ್‌ ರಿಕಾರ್ಡರ್‌, ನೋಟ್‌ ಪ್ಯಾಡ್‌, ಮಾರ್ಗಸೂಚಕ, ವಿಶ್ವಕೋಶ, ಪತ್ರಿಕೆ, ಅಟ್ಲಾಸ್ ಆಗಿ.... ಹೀಗೆ ಪಟ್ಟಿ ಬೆಳೆಯುತ್ತದೆ. ವಾಸ್ತವದಲ್ಲಿ ಈ ಎಲ್ಲಾ ವಸ್ತುಗಳ ಖರೀದಿಯ ಅಗತ್ಯವೇ ಈಗ ಇಲ್ಲ.

ಗ್ರಾಹಕನೇ ರಾಜ: ತೀವ್ರ ಪೈಪೋಟಿಯ ಈ ವ್ಯಾಪಾರಿ ಜಗತ್ತಿನಲ್ಲಿ ಗ್ರಾಹಕನೇ ರಾಜ. ಈಗ ವಿದೇಶಕ್ಕೆ ತಯಾರಾಗುವ ಬಟ್ಟೆ ಬರೆಗಳೂ ರಿಯಾಯ್ತಿ ದರದಲ್ಲಿ ಸ್ಥಳೀಯವಾಗಿಯೇ ದೊರೆಯುತ್ತವೆ. ಸೂಕ್ತ ಕಾಲದ ಡಿಸ್ಕೌಂಟ್‌ಗಾಗಿ ಕಾಯಬೇಕು ಅಷ್ಟೆ.

ಆನ್‌ಲೈನ್‌ ಜಗತ್ತಿನಲ್ಲಿ ಹಲವು ವಸ್ತುಗಳ ಬೆಲೆಯನ್ನು ತುಲನಾತ್ಮಕವಾಗಿ ಮೊಬೈಲ್ ಮೂಲಕವೇ ತಿಳಿಯಬಹುದು. ಪೇಟೆಗೆ ಹೋಗಿ ಹಲವು ಅಂಗಡಿಗಳನ್ನು ಸಂಪರ್ಕಿಸಿ, ಬೆಲೆ ತೂಗಿ ನೋಡಿ ಕೊಂಡು ಕೊಳ್ಳುವ ಅಗತ್ಯವೇ ಇಲ್ಲ. ಸರಕು ಮನೆ ಬಾಗಿಲಿಗೇ ತಲುಪುವುದರಿಂದ ಹಲವು ರೀತಿಯಲ್ಲಿ ಹಣ ಉಳಿತಾಯ ಮಾಡಬಹುದಾಗಿದೆ.

ಇ–ಕಾಮರ್ಸ್ ತಾಣಗಳು ಏರ್ಪಡಿಸುವ ವಿಶೇಷ ಮಾರಾಟ ಸಂದರ್ಭಗಳಲ್ಲಿ ಕೆಲ ನಿಬಂಧನೆಗಳಿಗೆ ಅನುಗುಣವಾಗಿ ದಿನ ಬಳಕೆಯ ಗೃಹೋಪಯೋಗಿ ಸರಕು, ಎಲೆಕ್ಟ್ರಾನಿಕ್‌ ಉಪಕರಣ ಸೇರಿದಂತೆ ವೈವಿಧ್ಯಮಯ ಸರಕುಗಳನ್ನು ಅಗ್ಗದ ಬೆಲೆಗೆ ಖರೀದಿಸಬಹುದಾಗಿದೆ.

ವಾಟ್ಸ್‌ಆ್ಯಪ್‌ ಮುಂತಾದ ಸಾಮಾಜಿಕ ತಾಣದ ಮೂಲಕ ವಿಶ್ವದ ಯಾವುದೇ ಮೂಲೆಯಲ್ಲಿ ಇರುವ ವ್ಯಕ್ತಿಯೊಂದಿಗೆ ಅಂತರ್ಜಾಲದ ಮೂಲಕ ಸುಲಭವಾಗಿ ಸಂವಹನ ನಡೆಸಬಹುದು. ಇಂಧನ ಉಳಿತಾಉದ ವಿದ್ಯುದ್ದೀಪ, ಉಪಕರಣಗಳ ಬಳಕೆಯಿಂದ ವಿದ್ಯುತ್‌‌ನ್ನೂ ಉಳಿಸಬಹುದು.

ಲ್ಯಾಂಡ್‌ಲೈನ್ ನಂಬರ್‌ಗಾಗಿ ಬಿಎಸ್‌ಎನ್‌ಎಲ್ ಫೋನ್‌ ಬಳಸುವವರು ಅಸಂಖ್ಯ ಬಳಕೆದಾರರು ಇದ್ದಾರೆ. ಮೊಬೈಲ್ ಬಂದ ಮೇಲೆ ಲ್ಯಾಂಡ್‌ಲೈನ್ ಬಳಕೆ ಕಡಿಮೆಯಾಗಿದೆ. ಆದರೆ ಹಿಂದೆ ಕೊಟ್ಟಿರುವ ನಂಬರ್‌ನಿಂದ ಹಲವಾರು ಮಂದಿಯ ಸಂಪರ್ಕ ಕಡಿದು ಹೋಗುವ ಕಾರಣದಿಂದಲೇ ಅನೇಕರು ಲ್ಯಾಂಡ್‌ಲೈನ್ ಬಳಸುತ್ತಿದ್ದಾರೆ. ಸ್ಥಿರ ದೂರವಾಣಿಗೆ ಬರುವ ಕರೆಗಳನ್ನು ಮೊಬೈಲ್‌ಗೆ ವರ್ಗಾಯಿಸುವ ಸೌಲಭ್ಯವನ್ನು ಬಿಎಸ್‌ಎನ್‌ಎಲ್‌ ಒದಗಿಸಿದೆ. ಇಲ್ಲಿಯೂ ಕೆಲಮಟ್ಟಿಗೆ ಹಣ ಉಳಿಸಬಹುದು.

ಇಲೆಕ್ಟ್ರಿಕಲ್ ಷೇವರ್ ಬಳಸಲು ಆರಂಭದಲ್ಲಿ ಹೆಚ್ಚು ಹಣ ವೆಚ್ಚವಾದರೂ ನಂತರ ಹಲವಾರು ವಸ್ತುಗಳ ಅಗತ್ಯತೆಯೇ ನಿಮಗೆ ಬರುವುದಿಲ್ಲ. ನೀರು, ಬ್ಲೇಡ್‌, ಷೇವಿಂಗ್‌ಕ್ರಿಮ್, ಷೇವಿಂಗ್ ಬ್ರಷ್, ಆಫ್ಟ್‌ರ್ ಷೇವಿಂಗ್ ಲೋಷನ್... ಹೀಗೆ ಹಲವು ಸರಕುಗಳ ಅಗತ್ಯವೇ ಬರುವುದಿಲ್ಲ. ಇಲೆಕ್ಟ್ರಿಕಲ್ ಷೇವರ್‌ ರಿಜಾರ್ಜ್ ಮಾಡಬಹುದಾಗಿದೆ. ಹೀಗಾಗಿ ಬ್ಯಾಟರಿಯ ಖರೀದಿಯ ಅಗತ್ಯವೂ ಇರುವುದಿಲ್ಲ. ಪ್ರವಾಸದಲ್ಲಿ ತೆಗೆದುಕೊಂಡು ಹೋಗಲು ಅನುಕೂಲವಾಗಿರುತ್ತದೆ. ಷೇವಿಂಗ್ ಪೂರಕ ಪರಿಕರಗಳನ್ನು ತೆಗೆದುಕೊಂಡು ಹೋಗುವ ಅಗತ್ಯ ಇರುವುದಿಲ್ಲ.

ಆನ್‌ಲೈನ್‌ ಪೂರೈಕೆ ಬಂದ ನಂತರ ಔಷಧಿ ಬೆಲೆ ಅಗ್ಗವಾಗಿವೆ. ಔಷಧಿಗಳು ‘ಜೆನರಿಕ್’ ರೂ‍ಪದಲ್ಲಿ ಅಗ್ಗದ ದರದಲ್ಲಿ ಲಭ್ಯವಾಗುತ್ತಿವೆ.

ಊಟ, ತಿಂಡಿಗೆ ಇಂದಿರಾ ಕ್ಯಾಂಟೀನ್ ನೆಚ್ಚಿಕೊಂಡರೆ ಸಾಕಷ್ಟು ದುಡ್ಡು ಉಳಿಸಬಹುದು. ಒಂದು ರೂಪಾಯಿಗೆ 1 ಕೆಜಿ ಅಕ್ಕಿ ಮುಂತಾದ ಕೊಡುಗೆಗಳೂ ಹಣ ಉಳಿಸಲು ನೆರವಾಗುತ್ತಿವೆ.

Bounce ನಂತಹ ಬಾಡಿಗೆ ಸ್ಕೂಟರ್‌ ಸೇವೆ ಅಗ್ಗದ ದರದಲ್ಲಿ ದೊರೆಯುತ್ತಿದೆ.ಇದರಿಂದ ವಾಹನ ಖರೀದಿಯ ಹಣ ಉಳಿಸಬಹುದು. ಮೆಟ್ರೊ ಬಳಸುವಾಗ ಪ್ರಿಪೇಯ್ಡ್‌ ಕಾರ್ಡ್‌ದಾರರಿಗೆ ನೀಡುವ ರಿಯಾಯ್ತಿಯಿಂದಲೂ ಹಣ ಉಳಿಯುತ್ತಿದೆ. ಕರೆದಲ್ಲಿಗೆ ಬರುವ ಓಲಾ, ಉಬರ್‌ನ ಕಾರು, ಆಟೊಗಳಿಂದಲೂ ಇಂಧನ ಮತ್ತು ಹಣ ಉಳಿತಾಯವಾಗುತ್ತಿದೆ.

ಮನೋರಂಜನೆಯಲ್ಲೂ ಉಳಿತಾಯ. ಡಿಟಿಎಚ್‌ ಸೇವೆಯಲ್ಲಿ ವೀಕ್ಷಿಸಬಹುದಾದ ಚಾನೆಲ್‌ ಸೇರಿಸುವ ಕಡಿತಗೊಳಿಸುವ ಸೌಲಭ್ಯ (a la carte) ಇರುವುದರಿಂದ ಅಲ್ಲೂ ಉಳಿತಾಯ ಸಾಧ್ಯ. ಸಿನಿಮಾ ಟಿಕೆಟ್‌ ಕಾಳಸಂತೆಯೂ ಈಗಿಲ್ಲ. ಮೊಬೈಲ್ ಮೂಲಕವೇ ಟಿಕೆಟ್ ಖರೀದಿಸಬಹುದು. ಮೊಬೈಲ್‌ ಆ್ಯಪ್‌ನಲ್ಲಿ ರಾತ್ರಿ 11ರ ವರೆಗೂ ಬೇಡಿಕೆ ಸಲ್ಲಿಸಿದರೆ ಬೆಳಗಿನ ಹೊತ್ತು ಮನೆ ಬಾಗಿಲಿಗೆ ಹಾಲು, ತರಕಾರಿ ತಂದುಕೊಡುತ್ತಾರೆ. ಬ್ಯಾಂಕ್‌ ಖಾತೆ ಮೂಲಕ ಹಣ ವರ್ಗಾವಣೆಯೂ ಈಗ ಉಚಿತವಾಗಿದೆ. ಸೂಕ್ತ ವಿಧಾನಗಳಿಂದ ತೆರಿಗೆ ಉಳಿಸಬಹುದು. ವೈದ್ಯಕೀಯ ವಿಮೆಯಿಂದ ಆಪತ್ಕಾಲದಲ್ಲಿ ಹಣದ ಖರ್ಚನ್ನು ಉಳಿಸಬಹುದು. ಹೀಗೆ ಉಳಿತಾದ ಪಟ್ಟಿ ಬೆಳೆಯುತ್ತದೆ. ಸೂಕ್ತ ತಜ್ಞರನ್ನು ಸಂಪರ್ಕಿಸಿ ಹಣವನ್ನು ಉಳಿಸಿ ಬೆಳೆಸಬಹುದು. ಉಳಿತಾಯದಿಂದಲೇ ಹಣ ಗಳಿಸುವ, ನೆಮ್ಮದಿ ಗಳಿಸುವ ‘ಉದ್ಯೋಗ’ ವಂತೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT