ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಬಿಐನಿಂದ ₹6,959 ಕೋಟಿ ಲಾಭಾಂಶ ಪಾವತಿ

Published 22 ಜೂನ್ 2024, 13:58 IST
Last Updated 22 ಜೂನ್ 2024, 13:58 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು (ಎಸ್‌ಬಿಐ) 2023–24ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ಒಟ್ಟು ₹6,959 ಕೋಟಿ ಲಾಭಾಂಶ ಪಾವತಿಸಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ, ಎಸ್‌ಬಿಐ ಅಧ್ಯಕ್ಷ ದಿನೇಶ್‌ ಖಾರಾ ಅವರು ಲಾಭಾಂಶದ ಚೆಕ್‌ ಅನ್ನು ಹಸ್ತಾಂತರಿಸಿದರು. ಈ ವೇಳೆ ಹಣಕಾಸು ಸೇವೆ ಕಾರ್ಯದರ್ಶಿ ವಿವೇಕ್‌ ಜೋಶಿ ಹಾಜರಿದ್ದರು.

2022–23ನೇ ಆರ್ಥಿಕ ವರ್ಷದಲ್ಲಿ ಎಸ್‌ಬಿಐ ಪ್ರತಿ ಷೇರಿಗೆ ₹11.30 ಲಾಭಾಂಶ ಘೋಷಿಸಿತ್ತು. 2023–24ರಲ್ಲಿ ₹13.70 ಲಾಭಾಂಶ ಪ್ರಕಟಿಸಿದೆ. ಪೂರ್ಣ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ ₹67,085 ಕೋಟಿ ನಿವ್ವಳ ಲಾಭ ಗಳಿಸಿದೆ.

ಬಿಒಎಂನಿಂದ ₹857 ಕೋಟಿ ಪಾವತಿ:

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಮಹಾರಾಷ್ಟ್ರವು (ಬಿಒಎಂ) ಕೇಂದ್ರಕ್ಕೆ ₹857 ಕೋಟಿ ಲಾಭಾಂಶ ಪಾವತಿಸಿದೆ. 

ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ನಿಧು ಸಕ್ಸೇನಾ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ಆಶೀಶ್ ಪಾಂಡೆ ಅವರು, ಲಾಭಾಂಶದ ಚೆಕ್‌ ಅನ್ನು ಸಚಿವೆ ನಿರ್ಮಲಾ ಅವರಿಗೆ ಹಸ್ತಾಂತರಿಸಿದರು. ‌

2023–24ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ ಪ್ರತಿ ಷೇರಿಗೆ ₹1.40 ಲಾಭಾಂಶ ಘೋಷಿಸಿದೆ. ಕೇಂದ್ರ ಸರ್ಕಾರವು ಬ್ಯಾಂಕ್‌ನ ಶೇ 86.46ರಷ್ಟು ಷೇರುಗಳ ಮೇಲೆ ಒಡೆತನ ಹೊಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT