ಮಂಗಳವಾರ, ಸೆಪ್ಟೆಂಬರ್ 17, 2019
21 °C

2018–19ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ಎಸ್‌ಬಿಐ ಲಾಭ ₹ 838 ಕೋಟಿ

Published:
Updated:

ನವದೆಹಲಿ: 2018–19ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್‌ (ಎಸ್‌ಬಿಐ) ₹ 838 ಕೋಟಿ ನಿವ್ವಳ ಲಾಭ ಗಳಿಸಿದೆ.

ವಸೂಲಿಯಾಗದ ಸಾಲದ ಪ್ರಮಾಣದಲ್ಲಿ (ಎನ್‌ಪಿಎ) ಇಳಿಕೆ ಆಗಿರುವುದರಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

2017–18ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ ₹ 7,718 ಕೊಟಿಗಳಷ್ಟು ನಷ್ಟ ಅನುಭವಿಸಿತ್ತು.

ತ್ರೈಮಾಸಿಕದಲ್ಲಿ ವರಮಾನ ₹68,436 ಕೋಟಿಗಳಿಂದ₹ 75,670 ಕೋಟಿಗಳಿಂದ ಶೇ 11ರಷ್ಟು ಏರಿಕೆಯಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

2018–19ನೇ ಹಣಕಾಸು ವರ್ಷಕ್ಕೆ ನಿವ್ವಳ ಲಾಭ ₹ 3,069 ಕೋಟಿಗಳಷ್ಟಿದೆ. 2017–18ನೇ ಹಣಕಾಸು ವರ್ಷದಲ್ಲಿ ₹ 4,187 ಕೋಟಿಗಳಷ್ಟು ನಷ್ಟ ಕಂಡಿತ್ತು. ವರಮಾನ ₹ 3.01 ಲಕ್ಷ ಕೋಟಿಗಳಿಂದ ₹ 3.30 ಲಕ್ಷ ಕೋಟಿಗಳಿಗೆ ಅಲ್ಪ ಏರಿಕೆ ಕಂಡಿದೆ.

ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಶೇ 5.73 ರಿಂದ ಶೇ 3.01ಕ್ಕೆ ಇಳಿಕೆಯಾಗಿದೆ.

Post Comments (+)