ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಸ್‌ ಬ್ಯಾಂಕ್‌ ನೆರವಿಗೆ ಎಸ್‌ಬಿಐ: ₹ 10,000 ಕೋಟಿ ಹೂಡಿಕೆಗೆ ಅವಕಾಶ

Last Updated 7 ಮಾರ್ಚ್ 2020, 13:45 IST
ಅಕ್ಷರ ಗಾತ್ರ

ಮುಂಬೈ:ಆರ್ಥಿಕ ಸಂಕಷ್ಟದಲ್ಲಿರುವ ಯೆಸ್‌ ಬ್ಯಾಂಕ್‌ನ ಪುನಶ್ಚೇತಕ್ಕೆ ಗರಿಷ್ಠ ₹ 10 ಸಾವಿರ ಕೋಟಿಯವರೆಗಿನ ಹೂಡಿಕೆ ಮಿತಿಯನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ನಿಗದಿಪಡಿಸಿದೆ.

‘ಪುನಶ್ಚೇತನ ಯೋಜನೆಯ ಕುರಿತಾಗಿ ನಮ್ಮ ಕಾನೂನು ತಜ್ಞರ ತಂಡ ಪರಿಶೀಲನೆ ನಡೆಸುತ್ತಿದೆ. ಅದು ಪೂರ್ಣಗೊಂಡ ಬಳಿಕ ಸೋಮವಾರ ಆರ್‌ಬಿಐಗೆ ನಮ್ಮ ಸಲಹೆ ಮತ್ತು ಪ್ರತಿಕ್ರಿಯೆ ನೀಡಲಾಗುವುದು. ಆರ್‌ಬಿಐ, ಬ್ಯಾಂಕ್‌ಗೆ ವಿಧಿಸಿರುವ 30 ದಿನಗಳ ನಿರ್ಬಂಧ ಮುಗಿಯುವುದರ ಒಳಗಾಗಿ ಯೋಜನೆಗೆ ಅನುಮತಿ ಪಡೆದು, ಜಾರಿಗೊಳಿಸಲು ಪ್ರಯತ್ನಿಸಲಾಗುವುದು’ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ತಿಳಿಸಿದ್ದಾರೆ.

‘ಪಾಲು ಬಂಡವಾಳ ಖರೀದಿಸುವ ಸಂಬಂಧ ಒಕ್ಕೂಟವನ್ನು ರಚಿಸುವಂತೆ ಎಸ್‌ಬಿಐಗೆ ಹಲವು ಹೂಡಿಕೆದಾರರು ಕೇಳಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ.ಶೇ 49ರಷ್ಟು ಷೇರನ್ನು ಎಸ್‌ಬಿಐ ಒಂದೇ ಖರೀದಿಸುವುದಾದರೆ ತಕ್ಷಣಕ್ಕೆ ₹ 2,450 ಕೋಟಿ ಹೂಡಿಕೆಯ ಅಗತ್ಯವಿದೆ.ಯೆಸ್‌ ಬ್ಯಾಂಕ್‌ನ ರಕ್ಷಣೆಗಾಗಿ ಮಾಡಲಿರುವ ಹೂಡಿಕೆಯಿಂದ ಎಸ್‌ಬಿಐನ ಬಂಡವಾಳ ಲಭ್ಯತೆ ಪ್ರಮಾಣದ ಮೇಲೆ ಹೆಚ್ಚಿನ ಪರಿಣಾಮವೇನೂ ಬೀರುವುದಿಲ್ಲ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT