ಭಾರತೀಯ ಸ್ಟೇಟ್ ಬ್ಯಾಂಕ್ನ (ಎಸ್ಬಿಐ) ಷೇರಿನ ಮೌಲ್ಯ ₹1,300 ಆಗಲಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.

ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್ನ ಹಣಕಾಸಿನ ಸ್ಥಿತಿಯು ಬಹಳ ಸದೃಢವಾಗಿದೆ, ಬ್ಯಾಂಕ್ನ ಆಸ್ತಿ ಗುಣಮಟ್ಟ ಸುಧಾರಿಸಿದೆ. ಜೊತೆಗೆ ಬ್ಯಾಂಕ್ ಉತ್ತಮ ಲಾಭ ಗಳಿಸಿದೆ. ಇದೇ ಅವಧಿಯಲ್ಲಿ ರಿಟೇಲ್, ಅತಿಸಣ್ಣ ಮತ್ತು ಸಣ್ಣ ಉದ್ದಿಮೆಗಳು (ಎಸ್ಎಂಐ), ಕೃಷಿ ಹಾಗೂ ಕಾರ್ಪೊರೇಟ್ ವಲಯದ ಸಾಲದ ಬೆಳವಣಿಗೆ ದರ ಶೇ 15.6ಕ್ಕೆ ಹೆಚ್ಚಿದೆ.

ದೇಶೀಯ ನಿವ್ವಳ ಬಡ್ಡಿ ವರಮಾನ (ಎನ್ಐಎಂ) ಶೇ 3.12ರಷ್ಟಿದೆ. ಶಿಸ್ತುಬದ್ಧ ನಿರ್ವಹಣೆಯು ವೆಚ್ಚ-ವರಮಾನದ ಅನುಪಾತವನ್ನು ಶೇ 50ರ ಬಳಿ ಇರಿಸಿತ್ತು. ಒಟ್ಟು ವಸೂಲಾಗದ ಸಾಲದ ಪ್ರಮಾಣ (ಜಿಎನ್ಪಿಎ) ಶೇ 1.57 ಮತ್ತು ನಿವ್ವಳ ಎನ್ಪಿಎ ಶೇ 0.39ರಷ್ಟಿದೆ.

ಬ್ಯಾಂಕ್ನ ಸಾಲ ನೀಡುವಿಕೆ, ಹೆಚ್ಚಿನ ಪ್ರಮಾಣದಲ್ಲಿ ಇರುವ ಬಂಡವಾಳ, ನಿವ್ವಳ ಬಡ್ಡಿ ವರಮಾನ ಶೇ 3ಕ್ಕಿಂತ ಹೆಚ್ಚಿರಲಿದೆ ಎಂದು ಬ್ಯಾಂಕ್ನ ಆಡಳಿತ ಮಂಡಳಿಗೆ ಇರುವ ವಿಶ್ವಾಸದ ಕಾರಣದಿಂದಾಗಿ 2026–27ರ ವೇಳೆಗೆ ಬ್ಯಾಂಕ್ನ ಆಸ್ತಿ ಮೇಲಿನ ಗಳಿಕೆ (ಆರ್ಒಎ) ಮತ್ತು ಹೂಡಿಕೆ ಮೇಲಿನ ಲಾಭ (ಆರ್ಒಇ) ಕ್ರಮವಾಗಿ ಶೇ 1.1 ಮತ್ತು ಶೇ 15.9ರಷ್ಟಾಗಲಿದೆ ಎಂದು ಮೋತಿಲಾಲ್ ಓಸ್ವಾಲ್ ಅಂದಾಜಿಸಿದೆ.

ಬುಧವಾರದ ವಹಿವಾಟಿನ ಅಂತ್ಯಕ್ಕೆ ಎಸ್ಬಿಐನ ಷೇರು ಬೆಲೆಯು ₹1,182 ಆಗಿದೆ.

(ಬ್ರೋಕರೇಜ್ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.