ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂ’ ತೀರ್ಪು: ರಿಲಯನ್ಸ್‌ ಇನ್ಫ್ರಾಸ್ಟಕ್ಚರ್‌ ಷೇರು ಕುಸಿತ

Published 10 ಏಪ್ರಿಲ್ 2024, 16:32 IST
Last Updated 10 ಏಪ್ರಿಲ್ 2024, 16:32 IST
ಅಕ್ಷರ ಗಾತ್ರ

ನವದೆಹಲಿ: ಉದ್ಯಮಿ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಇನ್ಫ್ರಾಸ್ಟಕ್ಚರ್‌ ಲಿಮಿಟೆಡ್‌ಗೆ ₹8 ಸಾವಿರ ಕೋಟಿ ಪಾವತಿಸುವಂತೆ ಮಧ್ಯಸ್ಥಿಕೆ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಬುಧವಾರ ರದ್ದುಪಡಿಸಿದೆ.

ದೆಹಲಿ ಮೆಟ್ರೊ ರೈಲು ನಿಗಮವು (ಡಿಎಂಆರ್‌ಸಿ) ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅಧ್ಯಕ್ಷತೆಯ ತ್ರಿಸದಸ್ಯ ನ್ಯಾಯಪೀಠವು ಈ ತೀರ್ಪು ನೀಡಿದೆ.‌

ನವದೆಹಲಿಯ ಏರ್‌ಪೋರ್ಟ್‌ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಸಂಬಂಧಿಸಿದಂತೆ ‌2008ರ ಆಗಸ್ಟ್‌ನಲ್ಲಿ ಡಿಎಂಆರ್‌ಸಿ ಮತ್ತು ಅನಿಲ್‌ ಅಂಬಾನಿ ಒಡೆತನದ ‌ದೆಹಲಿ ಏರ್‌ಪೋರ್ಟ್‌ ಮೆಟ್ರೊ ಎಕ್ಸ್‌ಪ್ರೆಸ್‌ ಪ್ರೈವೆಟ್‌ ಲಿಮಿಟೆಡ್‌ (ಡಿಎಎಂಇಪಿಎಲ್‌) ನಡುವೆ ಒಪ್ಪಂದವಾಗಿತ್ತು.

ನಾಲ್ಕು ವರ್ಷದ ಬಳಿಕ ಈ ಒಪ್ಪಂದ ಮುರಿದು ಬಿದ್ದಿತು. ಇದನ್ನು ಪ್ರಶ್ನಿಸಿ ಡಿಎಂಆರ್‌ಸಿ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು, ರಿಲಯನ್ಸ್‌ ಇನ್ಫ್ರಾಸ್ಟಕ್ಚರ್‌ ಲಿಮಿಟೆಡ್‌ಗೆ ₹3 ಸಾವಿರ ಕೋಟಿ ಹಾಗೂ ಬಡ್ಡಿ ಪಾವತಿಸುವಂತೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಡಿಎಂಆರ್‌ಸಿ ತ್ರಿಸದಸ್ಯ ನ್ಯಾಯಪೀಠದ ಮೊರೆ ಹೋಗಿತ್ತು.

ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಬೆನ್ನಲ್ಲೇ ರಿಲಯನ್ಸ್‌ ಇನ್ಫ್ರಾಸ್ಟಕ್ಚರ್‌ ಷೇರಿನ ಮೌಲ್ಯ ಶೇ 20ರಷ್ಟು ಕುಸಿದಿದೆ. ಷೇರಿನ ಬೆಲೆ ₹227ಕ್ಕೆ ಮುಟ್ಟಿದೆ. ಕಂಪನಿಯ ಎಂ–ಕ್ಯಾಪ್‌ ₹2,250 ಕೋಟಿ ಕರಗಿದ್ದು, ಒಟ್ಟು ಮಾರುಕಟ್ಟೆ ಮೌಲ್ಯ ₹9,008 ಕೋಟಿಗೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT