ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಸ್ನೈಡರ್‌ ಎಲೆಕ್ಟ್ರಿಕ್ಸ್‌ ಕ್ಯಾಂಪಸ್ ಉದ್ಘಾಟನೆ

Published 30 ಮೇ 2024, 16:33 IST
Last Updated 30 ಮೇ 2024, 16:33 IST
ಅಕ್ಷರ ಗಾತ್ರ

ಬೆಂಗಳೂರು: ಇಂಧನ ನಿರ್ವಹಣೆ ಮತ್ತು ನೆಕ್ಸ್ಟ್‌ಜೆನ್‌ ಆಟೊಮೇಷನ್‌ನಲ್ಲಿ ಮುಂಚೂಣಿಯಲ್ಲಿರುವ ಫ್ರೆಂಚ್‌ ಮೂಲದ ಸ್ನೈಡರ್‌ ಎಲೆಕ್ಟ್ರಿಕ್ಸ್‌ನ ಅತಿದೊಡ್ಡ ಉದ್ಯೋಗಿ ಕ್ಯಾಂಪಸ್ ಗುರುವಾರ ನಗರದಲ್ಲಿ ಉದ್ಘಾಟನೆಯಾಯಿತು.

ಬಾಗ್‌ಮನೆ ಸೋಲಾರಿಯಂ ಸಿಟಿಯಲ್ಲಿರುವ ಈ ಕ್ಯಾಂಪಸ್ 6.30 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದೆ. ಗ್ಲೋಬಲ್ ಇನ್ನೋವೇಶನ್ ಹಬ್, ತರಬೇತಿ ಕೇಂದ್ರ, ಆರ್ ಆ್ಯಂಡ್‌ ಡಿ ಸೆಂಟರ್, ಕೌಶಲ ಕೇಂದ್ರ ಮತ್ತು ಡಿಜಿಟಲ್ ಹಬ್ ಹೊಂದಿದ್ದು, 8 ಸಾವಿರ ವೃತ್ತಿಪರರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಉತ್ಪಾದನೆ, ನಾವೀನ್ಯತೆ, ಆರ್ ಆ್ಯಂಡ್‌ ಡಿ ಮತ್ತು ಕೌಶಲ ನಿರ್ಮಾಣದಲ್ಲಿ ನಡೆಯುತ್ತಿರುವ ಹೂಡಿಕೆಗಳನ್ನು ‘ಭಾರತ ಮತ್ತು ಪ್ರಪಂಚಕ್ಕಾಗಿ ಭಾರತದಲ್ಲಿಯೇ ತಯಾರಿಸಿ’ ಎಂಬ ಧ್ಯೇಯ ಹೊಂದಲಾಗಿದೆ ಎಂದು ತಿಳಿಸಿದೆ.

₹200 ಕೋಟಿ ಹೂಡಿಕೆ:

‘ಭಾರತದಲ್ಲಿ ಕಂಪನಿಯ ಹೂಡಿಕೆಯ ವೇಗ ಹೆಚ್ಚಿಸಲು ಒತ್ತು ನೀಡಲಾಗಿದೆ. ₹200 ಕೋಟಿ ವೆಚ್ಚದೊಂದಿಗೆ ಈ ಕ್ಯಾಂಪಸ್ ಆರಂಭಿಸಲಾಗಿದೆ. ಈ ಹೂಡಿಕೆಯು ಭಾರತದಲ್ಲಿ ಕಂಪನಿಯ ಬೆಳವಣಿಗೆಯ ವೇಗವನ್ನು ಹೆಚ್ಚಿಸಲಿದೆ’ ಎಂದು ಕಂಪನಿಯ ಸಿಇಒ ಪೀಟರ್ ಹೆರ್ವೆಕ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಇಂಧನ ನಿರ್ವಹಣೆ, ಕೈಗಾರಿಕಾ ಯಾಂತ್ರೀಕರಣದ ಬಗ್ಗೆ ಸಮಗ್ರ ಮಾಹಿತಿಯನ್ನು ಈ ಕ್ಯಾಂಪಸ್‌ ನೀಡಲಿದೆ. ಭಾರತವಲ್ಲದೆ ಜಾಗತಿಕ ಮಾರುಕಟ್ಟೆಗಳಿಗೂ ಅತ್ಯಾಧುನಿಕ ಉತ್ಪನ್ನಗಳನ್ನು ಹೆಚ್ಚಿಸಲು ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಿದ್ದೇವೆ’ ಎಂದು ಗ್ರೇಟರ್‌ ಇಂಡಿಯಾದ ವಲಯ ಅಧ್ಯಕ್ಷ ದೀಪಕ್‌ ಶರ್ಮಾ ತಿಳಿಸಿದರು.

ಬೆಂಗಳೂರಿನಲ್ಲಿ ಸ್ನೈಡರ್‌ ಎಲೆಕ್ಟ್ರಿಕ್ಸ್‌ ದೇಶದ ಅತಿದೊಡ್ಡ ಉದ್ಯೋಗಿ ಕ್ಯಾಂಪಸ್ ಅನ್ನು ಗುರುವಾರ ಉದ್ಘಾಟಿಸಿದೆ
ಬೆಂಗಳೂರಿನಲ್ಲಿ ಸ್ನೈಡರ್‌ ಎಲೆಕ್ಟ್ರಿಕ್ಸ್‌ ದೇಶದ ಅತಿದೊಡ್ಡ ಉದ್ಯೋಗಿ ಕ್ಯಾಂಪಸ್ ಅನ್ನು ಗುರುವಾರ ಉದ್ಘಾಟಿಸಿದೆ
ಸ್ನೈಡರ್‌ ಎಲೆಕ್ಟ್ರಿಕ್ಸ್‌ ಬೆಂಗಳೂರಿನಲ್ಲಿ ದೇಶದ ಅತಿದೊಡ್ಡ ಉದ್ಯೋಗಿ ಕ್ಯಾಂಪಸ್ ಅನ್ನು ಗುರುವಾರ ಉದ್ಘಾಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT