ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮನಿರ್ದೇಶನ: ಗಡುವು ವಿಸ್ತರಿಸಿದ ಸೆಬಿ

Last Updated 28 ಮಾರ್ಚ್ 2023, 13:35 IST
ಅಕ್ಷರ ಗಾತ್ರ

ನವದೆಹಲಿ: ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆ ಹೊಂದಿರುವವರು ನಾಮನಿರ್ದೇಶನ ಮಾಡಲು ಅಥವಾ ಯಾರನ್ನೂ ನಾಮನಿರ್ದೇಶನ ಮಾಡುವುದಿಲ್ಲ ಎಂಬ ಹೇಳಿಕೆ ಸಲ್ಲಿಸಲು ಇದ್ದ ಗಡುವನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಿದೆ.

ಈ ಮೊದಲು ಮಾರ್ಚ್‌ 31ರ ಗಡುವು ನಿಗದಿ ಮಾಡಲಾಗಿತ್ತು. ಈ ಗಡುವನ್ನು ಹಿಂದೆಯೂ ವಿಸ್ತರಿಸಲಾಗಿದೆ. ಷೇರು ಬ್ರೋಕರ್‌ಗಳು ತಮ್ಮ ಗ್ರಾಹಕರಿಗೆ, ನಾಮನಿರ್ದೇಶನ ಮಾಡುವಂತೆ ಅಥವಾ ನಾಮನಿರ್ದೇಶನ ಮಾಡುವುದಿಲ್ಲ ಎಂಬ ಹೇಳಿಕೆಯನ್ನು ಸಲ್ಲಿಸುವಂತೆ ಹದಿನೈದು ದಿನಕ್ಕೊಮ್ಮೆ ಇ–ಮೇಲ್‌ ಅಥವಾ ಎಸ್‌ಎಂಎಸ್‌ಅನ್ನು ಕಳುಹಿಸಬೇಕು ಎಂದು ಕೂಡ ಸೆಬಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT