ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೆಬಿ’ ವರಮಾನ ₹ 963 ಕೋಟಿ

Last Updated 22 ಜೂನ್ 2020, 14:11 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ)2018–19ನೇ ಹಣಕಾಸು ವರ್ಷದಲ್ಲಿ ₹ 963 ಕೋಟಿ ವರಮಾನ ಗಳಿಸಿದೆ.

2017–18ರಲ್ಲಿದ್ದ ₹ 855 ಕೋಟಿ ವರಮಾನಕ್ಕೆ ಹೋಲಿಸಿದರೆ ಶೇ 13ರಷ್ಟು ಏರಿಕೆಯಾಗಿದೆ.

ಒಟ್ಟಾರೆ ವೆಚ್ಚವು 2019ರ ಮಾರ್ಚ್‌ 31ರ ಅಂತ್ಯಕ್ಕೆ ₹ 414 ಕೋಟಿಗಳಿಂದ ₹ 492 ಕೋಟಿಗಳಿಗೆ ಏರಿಕೆಯಾಗಿದೆ.ಆಡಳಿತಾತ್ಮಕ ವೆಚ್ಚವು ₹ 121 ಕೋಟಿಗಳಿಂದ ₹ 131 ಕೋಟಿಗಳಿಗೆ ಹೆಚ್ಚಾಗಿದೆ.

ನಿಯಂತ್ರಣ ಶುಲ್ಕ ₹ 624 ಕೋಟಿಗಳಿಂದ ₹ 750 ಕೋಟಿಗಳಿಗೆ ಹಾಗೂ ಇತರೆ ವರಮಾನ ₹ 10 ಕೋಟಿಗಳಿಂದ ₹ 17 ಕೋಟಿಗಳಿಗೆ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT