ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೆಯ ಅಲೆಯಿಂದಾಗಿ ವಾಹನೋದ್ಯಮಕ್ಕೆ ಪೆಟ್ಟು -ಐಸಿಆರ್‌ಎ

Last Updated 20 ಮೇ 2021, 12:23 IST
ಅಕ್ಷರ ಗಾತ್ರ

ಮುಂಬೈ: ಕೊರೊನಾ ವೈರಾಣುವಿನ ಎರಡನೆಯ ಅಲೆಯು ದೇಶಿ ಆಟೊಮೊಬೈಲ್‌ ಉದ್ಯಮದ ಚೇತರಿಕೆಗೆ ಪೆಟ್ಟು ನೀಡಿದೆ ಎಂದು ರೇಟಿಂಗ್ಸ್ ಸಂಸ್ಥೆ ಐಸಿಆರ್‌ಎ ಹೇಳಿದೆ. ಸತತ ಎರಡು ವರ್ಷಗಳಲ್ಲಿ ಸವಾಲು ಎದುರಿಸಿದ್ದ ದೇಶಿ ಆಟೊಮೊಬೈಲ್‌ ಉದ್ಯಮವು, ಕೊರೊನಾ ಎರಡನೆಯ ಅಲೆ ಎದುರಾಗದಿದ್ದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಚೇತರಿಕೆ ಕಾಣುತ್ತಿತ್ತು ಎಂದೂ ಐಸಿಆರ್‌ಎ ಅಭಿಪ್ರಾಯ ವ್ಯಕ್ತಪಡಿಸಿದೆ.

ವಾಹನಗಳಿಗೆ ಅಗತ್ಯವಿರುವ ಬಿಡಿಭಾಗಗಳನ್ನು ತಯಾರಿಸುವ ಹಲವು ಉದ್ಯಮಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಬೇರೆ ಬೇರೆ ಪ್ರದೇಶಗಳಲ್ಲಿ ವಾಹನಗಳ ಡೀಲರ್‌ಗಳಿಗೆ ಮಳಿಗೆ ತೆರೆಯಲು ಸ್ಥಳೀಯ ಲಾಕ್‌ಡೌನ್‌ ನಿರ್ಬಂಧಗಳಿಂದಾಗಿ ಸಾಧ್ಯವಾಗಿಲ್ಲ ಎಂದು ಸಂಸ್ಥೆ ಹೇಳಿದೆ.

ಎರಡನೆಯ ಅಲೆಯು ದ್ವಿಚಕ್ರ ವಾಹನಗಳ ಮಾರಾಟದ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ ಎಂದು ಅದು ಅಂದಾಜು ಮಾಡಿದೆ. ‘ವೈದ್ಯಕೀಯ ಉದ್ದೇಶಗಳಿಗಾಗಿ ಮಾಡಿರುವ ವೆಚ್ಚಗಳ ಪರಿಣಾಮವಾಗಿ ವ್ಯಕ್ತಿಗಳು ಹಾಗೂ ಕುಟುಂಬಗಳ ಖರೀದಿ ಸಾಮರ್ಥ್ಯ ಗಣನೀಯವಾಗಿ ಕುಗ್ಗಿದೆ. ಇದರಿಂದಾಗಿ ವಾಹನಗಳ ಖರೀದಿ ಮೇಲೆ ಪರಿಣಾಮ ಉಂಟಾಗಲಿದೆ’ ಎಂದು ಐಸಿಆರ್‌ಎ ರೇಟಿಂಗ್ಸ್‌ ಸಂಸ್ಥೆಯ ಉಪಾಧ್ಯಕ್ಷ ಶಂಶೇರ್ ದಿವಾನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT