ಪೇಟೆ ಮೇಲೆ ತ್ರೈಮಾಸಿಕ ಫಲಿತಾಂಶದ ಪ್ರಭಾವ

ಶುಕ್ರವಾರ, ಏಪ್ರಿಲ್ 26, 2019
24 °C

ಪೇಟೆ ಮೇಲೆ ತ್ರೈಮಾಸಿಕ ಫಲಿತಾಂಶದ ಪ್ರಭಾವ

Published:
Updated:

ಮುಂಬೈ: 2018–19ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕವು ಷೇರುಪೇಟೆಗಳಲ್ಲಿ ಸಕಾರಾತ್ಮಕ ಚಲನೆಗೆ ಕಾರಣವಾಗಿದೆ.

ಉತ್ತಮ ಫಲಿತಾಂಶ ಪ್ರಕಟಿಸಿರುವ ಟಿಸಿಎಸ್‌ ಹೂಡಿಕೆ ಚಟುವಟಿಕೆಯನ್ನು ಹೆಚ್ಚಾಗುವಂತೆ ಮಾಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 138 ಅಂಶ ಹೆಚ್ಚಾಗಿ 38,905 ಅಂಶಗಳಲ್ಲಿ ಸೋಮವಾರವಹಿವಾಟು ಅಂತ್ಯ
ಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 46 ಅಂಶ ಹೆಚ್ಚಾಗಿ 11,690 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಟಿಸಿಎಸ್‌ ಷೇರುಗಳು ಶೇ 4.78ರಷ್ಟು ಏರಿಕೆ ಕಂಡಿದ್ದರೆ, ಇನ್ಫೊಸಿಸ್‌ ಕಂಪನಿಯ ವರಮಾನಕ್ಕೆ ಸಂಬಂಧಿಸಿದ ಆತಂಕದಿಂದಾಗಿ ಷೇರುಗಳು ಶೇ 2.83ರಷ್ಟು ಇಳಿಕೆಯಾಗಿವೆ.

ವಲಯವಾರು ಲೋಹ, ವಾಹನ ಮತ್ತು ದೂರಸಂಪರ್ಕ ಷೇರುಗಳು ಶೇ 2.24ರವರೆಗೂ ಏರಿಕೆ ದಾಖಲಿಸಿವೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 25 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹ 69.42ರಂತೆ ವಿನಿಮಯಗೊಂಡಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !