ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಮೂರನೆಯ ದಿನ ಸೆನ್ಸೆಕ್ಸ್, ನಿಫ್ಟಿ ಗಳಿಕೆ

Last Updated 27 ಜೂನ್ 2022, 12:36 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸತತ ಮೂರನೆಯ ದಿನದ ವಹಿವಾಟಿನಲ್ಲಿ ಏರಿಕೆ ಕಂಡಿವೆ. ಸೆನ್ಸೆಕ್ಸ್ ಸೋಮವಾರ 433 ಅಂಶ, ನಿಫ್ಟಿ 132 ಅಂಶ ಏರಿಕೆಯಾಗಿವೆ.

ಜಾಗತಿಕ ಮಾರುಕಟ್ಟೆಗಳಲ್ಲಿ ನಡೆದ ತೇಜಿ ವಹಿವಾಟು, ಹಣದುಬ್ಬರದ ಸುತ್ತಲಿನ ಕಳವಳ ತಗ್ಗಿದ್ದು ದೇಶಿ ಮಾರುಕಟ್ಟೆಗಳಲ್ಲಿ ಏರುಗತಿಯ ವಹಿವಾಟು ನಡೆಯಲು ಕಾರಣ ಎಂದು ವರ್ತಕರು ತಿಳಿಸಿದ್ದಾರೆ.

ಮೂರು ದಿನಗಳ ಗಳಿಕೆಯ ವಹಿವಾಟಿನಿಂದ ಸೆನ್ಸೆಕ್ಸ್ ಶೇಕಡ 2.56ರಷ್ಟು ಹಾಗೂ ನಿಫ್ಟಿ ಶೇ 2.73ರಷ್ಟು ಏರಿಕೆ ಕಂಡಿವೆ. ‘ಕೆಲವು ಅಗತ್ಯ ವಸ್ತುಗಳ ಬೆಲೆ ಇಳಿಕೆ ಆಗುತ್ತಿರುವುದು ಈಚಿನ ಕೆಲವು ದಿನಗಳಲ್ಲಿ ಸೂಚ್ಯಂಕಗಳ ಏರಿಕೆಗೆ ಕಾರಣವಾಗಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಅರ್ಥ ವ್ಯವಸ್ಥೆಯು ಮಂದಗತಿಗೆ ತಿರುಗಿ ಯುರೋಪ್, ಚೀನಾ ಮತ್ತು ಅಮೆರಿಕದಲ್ಲಿ ಕಚ್ಚಾ ತೈಲಕ್ಕೆ ಬೇಡಿಕೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆಯು ಹೂಡಿಕೆದಾರರಲ್ಲಿ ಇದೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿನ ಬದಲಾವಣೆಗಳು ಮಾರುಕಟ್ಟೆಗಳ ಏರಿಳಿತವನ್ನು ತೀರ್ಮಾನ ಮಾಡಲಿವೆ ಎಂದೂ ವಿಶ್ಲೇಷಕರು ಹೇಳಿದ್ದಾರೆ. ಅಲ್ಲದೆ, ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಆಗುವ ತೀರ್ಮಾನ ಕೂಡ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಲಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 0.13ರಷ್ಟು ಕಡಿಮೆ ಆಗಿ ಪ್ರತಿ ಬ್ಯಾರೆಲ್‌ಗೆ 112.93 ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT