ಗುರುವಾರ , ನವೆಂಬರ್ 14, 2019
18 °C

ಸತತ 6ನೇ ದಿನವೂ ಸೂಚ್ಯಂಕ ಏರಿಕೆ

Published:
Updated:
Prajavani

ಮುಂಬೈ  : ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸತತ 6ನೇ ದಿನವೂ ಏರಿಕೆ ದಾಖಲಿಸಿದೆ.

ಎಲ್ಲ ವಲಯಗಳಲ್ಲಿನ ಷೇರುಗಳ ಖರೀದಿ ಭರಾಟೆಯಿಂದ ಸೂಚ್ಯಂಕವು ಶುಕ್ರವಾರ 246 ಅಂಶ ಹೆಚ್ಚಾಗಿದೆ. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 75 ಅಂಶ ಏರಿಕೆ ಕಂಡಿದೆ.

ಯೆಸ್ ಬ್ಯಾಂಕ್‌ ಷೇರು ಗರಿಷ್ಠ ಗಳಿಕೆ (ಶೇ8.44) ಕಂಡಿದೆ. ನಂತರದ ಸ್ಥಾನದಲ್ಲಿ ಮಾರುತಿ, ಪವರ್‌ಗ್ರಿಡ್‌, ಎನ್‌ಟಿಪಿಸಿ, ಎಲ್‌ಆ್ಯಂಡ್‌ಟಿ ಮತ್ತು ಎಸ್‌ಬಿಐಗಳಿವೆ.

ಟಾಟಾ ಮೋಟರ್ಸ್‌, ಬಜಾಜ್‌ ಆಟೊ, ಭಾರ್ತಿ ಏರ್‌ಟೆಲ್‌, ಐಸಿಐಸಿಐ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌ ಮತ್ತು ಇನ್ಫೊಸಿಸ್‌ ಷೇರು ಬೆಲೆಗಳು ಶೇ 1.05ರವರೆಗೆ ಕುಸಿತ ಕಂಡಿವೆ.

‘ವಿದೇಶಿ ಹೂಡಿಕೆದಾರರ ಖರೀದಿ ಆಸಕ್ತಿ, ಅಮೆರಿಕ ಹಾಗೂ ಚೀನಾ ವ್ಯಾಪಾರ ಮಾತುಕತೆಗಳಲ್ಲಿನ ಪ್ರಗತಿ, ಬ್ರೆಕ್ಸಿಟ್‌ ಕುರಿತು ಇಂಗ್ಲೆಂಡ್‌ ಮತ್ತು ಯುರೋಪ್‌ ಒಕ್ಕೂಟದ ಮಧ್ಯೆ ಒಪ್ಪಂದ ಆಗಿರುವುದರಿಂದ ಷೇರುಪೇಟೆಯಲ್ಲಿ ಉತ್ಸಾಹ ಕಂಡು ಬಂದಿದೆ. ಈ ವಾರ ದೇಶಿ ಪೇಟೆಗಳು ಜಾಗತಿಕ ಪೇಟೆಗಳಿಗಿಂತ ಉತ್ತಮ ಸಾಧನೆ ಪ್ರದರ್ಶಿಸಿವೆ’ ಎಂದು ಕೋಟಕ್‌ ಸೆಕ್ಯುರಿಟೀಸ್‌ನ ಪಿಸಿಜಿ ಸಂಶೋಧನಾ ಉಪಾಧ್ಯಕ್ಷ ಸಂಜೀವ್‌ ಬರ್ಬದೆ ಹೇಳಿದ್ದಾರೆ.

 

ಪ್ರತಿಕ್ರಿಯಿಸಿ (+)